ಬೆಂಗಳೂರು : ಲಾಕ್ಡೌನ್ ಸಡಿಲಿಕೆಯ ಎರಡನೇ ದಿನವಾದ ಇಂದು ಬರೋಬ್ಬರಿ 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಎಣ್ಣೆಗೆ ಡಿಮ್ಯಾಂಡೋ ಡಿಮ್ಯಾಂಡು.. 2ನೇ ದಿನ ₹197 ಕೋಟಿಯಷ್ಟು ಮದ್ಯ ಮಾರಾಟ.. - ಕರ್ನಾಟಕದಲ್ಲಿ ಮದ್ಯ ಮಾರಾಟ
ನಿನ್ನೆ 45 ಕೋಟಿ ರೂಪಾಯಿನಷ್ಟು ಮದ್ಯದ ವಹಿವಾಟು ನಡೆದಿತ್ತು. ನಿನ್ನೆಯ ಎಣ್ಣೆ ವ್ಯಾಪಾರಕ್ಕೆ ಹೋಲಿಸಿದರೆ ಇಂದು ನಾಲ್ಕುಪಟ್ಟು ಹೆಚ್ಚು ಮದ್ಯ ಮಾರಾಟ ನಡೆದಿದೆ.
ಎರಡನೇ ದಿನ 197 ಕೋಟಿ ರೂ. ನಷ್ಟು ಮದ್ಯ ಮಾರಾಟ
ಕೊರೊನಾ ಲಾಕ್ಡೌನ್ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ ಮದ್ಯ ಮಾರಾಟ ರಾಜ್ಯದಲ್ಲಿ ನಿನ್ನೆಯಿಂದ ಆರಂಭವಾಗಿತ್ತು. ಎರಡನೇ ದಿನವಾದ ಇಂದು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
182 ಕೋಟಿ ರೂಪಾಯಿ ಬೆಲೆಬಾಳುವ 36.37 ಲಕ್ಷ ಲೀಟರ್ ಐಎಂಎಲ್ ಲಿಕ್ಕರ್ ಹಾಗೂ 15 ಕೋಟಿ ರೂಪಾಯು ಮೌಲ್ಯದ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ನಿನ್ನೆ 45 ಕೋಟಿ ರೂಪಾಯಿನಷ್ಟು ಮದ್ಯದ ವಹಿವಾಟು ನಡೆದಿತ್ತು. ನಿನ್ನೆಯ ಎಣ್ಣೆ ವ್ಯಾಪಾರಕ್ಕೆ ಹೋಲಿಸಿದರೆ ಇಂದು ನಾಲ್ಕುಪಟ್ಟು ಹೆಚ್ಚು ಮದ್ಯ ಮಾರಾಟ ನಡೆದಿದೆ.