ನೆಲಮಂಗಲ: ಪೊಲೀಸರ ಕಿರುಕುಳ ಮತ್ತು ನೆರೆಹೊರೆಯವರ ಚುಚ್ಚು ಮಾತಿನಿಂದ ನೊಂದ ಗೃಹಿಣಿ ನೇಣಿಗೆ ಶರಣಾಗಿರುವ ಆರೋಪ ಪ್ರಕರಣ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ. ಅಖಿಲಾ (35) ನೇಣಿಗೆ ಶರಣಾದ ಮಹಿಳೆ. ಸಾಯುವ ಮುನ್ನ ಮಹಿಳೆ ಡೆತ್ನೋಟ್ ಬರೆದಿಟ್ಟಿದ್ದು, ಸಾಲದ ಹಣಕ್ಕಾಗಿ ಚಂದನ್ ಎಂಬಾತ ಕೊಡುತ್ತಿದ್ದ ಕಾಟ ಮತ್ತು ನೆರೆಹೊರೆಯವರ ಚುಚ್ಚು ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ.
ಮೃತ ಅಖಿಲಾ ಪತ್ನಿ ಮಧುಸೂಧನ್ ಅವರು ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಬಳಿ 1 ಲಕ್ಷ ರೂ. ಸಾಲ ಪಡೆದಿದ್ದರಂತೆ. ಚಂದನ್ ಸಾಲದ ಹಣ ವಾಪಸ್ ನೀಡುವಂತೆ ಪ್ರತಿನಿತ್ಯ ಪೊಲೀಸರ ಮೂಲಕ ಕಾಟ ಕೊಡುತ್ತಿದ್ದನಂತೆ.