ಕರ್ನಾಟಕ

karnataka

ETV Bharat / state

ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ; 14 ಕೆಜಿ ಗಾಂಜಾ ವಶ - ಗಾಂಜಾ ಅಡ್ಡೆ ಮೇಲೆ ದಾಳಿ

ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ನೇತೃತ್ವದ ಪೊಲೀಸರ ತಂಡ ಹೊಸಕೋಟೆ ನಗರ ಸೇರಿದಂತೆ ಗ್ರಾಮಾಂತರ ಭಾಗದ ಲಾಲ್ ಬಾಗ್, ದಾಸರಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿ 14 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

Hoskote Police Station
ಹೊಸಕೋಟೆ ಪೊಲೀಸ್ ಠಾಣೆ

By

Published : Sep 4, 2020, 4:01 PM IST

ಹೊಸಕೋಟೆ:ಸ್ಯಾಂಡಲ್​ವುಡ್​ ನಲ್ಲಿ ಡ್ರಗ್ಸ್​ ಜಾಲದ ನಂಟು ಆರೋಪ ಹಿನ್ನೆಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಠಾಣೆ ಪೊಲೀಸರಿಂದ ಇಂದು ಹಲವೆಡೆ ದಾಳಿ ನಡೆದಿದೆ.

ಹೊಸಕೋಟೆ ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಹೊಸಕೋಟೆ ಉಪ ವಿಭಾಗದ 3 ಸರ್ಕಲ್ ಇನ್ಸ್​ಪೆಕ್ಟರ್​, 6 ಮಂದಿ ಪಿಎಸ್​ವೈ ಸೇರಿದಂತೆ 10 ತಂಡದಿಂದ ಏಕಕಾಲದಲ್ಲಿ ಸುಮಾರು 25 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ.

ಹೊಸಕೋಟೆ ಡಿವೈಎಸ್ಪಿ ನಿಂಗಪ್ಪ ಬಸಪ್ಪ ಸಕ್ರಿ

ಹೊಸಕೋಟೆ ನಗರ ಸೇರಿದಂತೆ ಗ್ರಾಮಾಂತರ ಭಾಗದ ಲಾಲ್ ಬಾಗ್, ದಾಸರಹಳ್ಳಿಯಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಸುಮಾರು 14 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದೆ.

ದಾಸರಹಳ್ಳಿಯ ಮನೆಯೊಂದರಲ್ಲಿ 4 ಕೆಜಿಯಷ್ಟು ಗಾಂಜಾ ದೊರೆತಿದೆ. ಇನ್ನು ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details