ಕರ್ನಾಟಕ

karnataka

ETV Bharat / state

ಹೊಸಕೋಟೆ ನಗರಸಭೆ ಚುನಾವಣೆ: ಶೇ. 75.76% ರಷ್ಟು ಮತದಾನ - ಹೊಸಕೋಟೆ ನಗರಸಭೆ ಚುನಾವಣೆ ಶೇಕಡಾ 75.76% ರಷ್ಟು ಮತದಾನ

ಹೊಸಕೋಟೆ ನಗರ ಸ್ಥಳೀಯ ಸಂಸ್ಥೆಗಳ 31 ವಾರ್ಡುಗಳಿಗೆ, ಭಾನುವಾರ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 75.76% ರಷ್ಟು ಮತದಾನವಾಗಿದೆ.

Hosakote Municipal Election
ಹೊಸಕೋಟೆ ನಗರಸಭೆ ಚುನಾವಣೆ: ಶೇಕಡಾ 75.76% ರಷ್ಟು ಮತದಾನ

By

Published : Feb 10, 2020, 2:34 AM IST

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ಸ್ಥಳೀಯ ಸಂಸ್ಥೆಗಳ 31 ವಾರ್ಡುಗಳಿಗೆ, ಭಾನುವಾರ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 75.76% ರಷ್ಟು ಮತದಾನವಾಗಿದೆ.

ಹೊಸಕೋಟೆ ನಗರಸಭೆ ಚುನಾವಣೆ: ಶೇಕಡಾ 75.76% ರಷ್ಟು ಮತದಾನ

ಒಟ್ಟು 35,885(75.76%) ಜನರು ಮತ ಚಲಾಯಿಸಿದ್ದಾರೆ. ಅದರಲ್ಲಿ 17,970(75.08%) ಪುರುಷ ಮತದಾರರು, 17,915(76.51%) ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು ಮತ ಚಲಾಯಿಸಿಲ್ಲ.

ವಾರ್ಡ್ ಸಂಖ್ಯೆ 27 ರ ಮತಗಟ್ಟೆ ಕೇಂದ್ರ ಸಂಖ್ಯೆ 27A ರಲ್ಲಿ ಅತಿ‌ ಹೆಚ್ಚು (92.50%) ಮತದಾನವಾಗಿದೆ. ಒಟ್ಟು 530(92.50%) ಜನ ಮತ ಚಲಾಯಿಸಿದ್ದಾರೆ. 262(87.63%) ಪುರುಷ ಮತದಾರರು, 268(97.81%) ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ವಾರ್ಡ್ ಸಂಖ್ಯೆ 26 ರ ಮತಗಟ್ಟೆ ಕೇಂದ್ರ ಸಂಖ್ಯೆ 26 ರಲ್ಲಿ ಅತಿ‌ ಕಡಿಮೆ (58.52%) ಮತದಾನವಾಗಿದೆ. ಒಟ್ಟು 491(58.52%) ಜನ ಮತ ಚಲಾಯಿಸಿದ್ದಾರೆ. 240(50.42%) ಪುರುಷ ಮತದಾರರು, 251(69.15%) ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 47373 ಮತದಾರರಿದ್ದು, ಅದರಲ್ಲಿ 23938 ಪುರುಷ ಮತದಾರರು, 23419 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರಿದ್ದಾರೆ.

ಹೊಸಕೋಟೆ ತಾಲ್ಲೂಕಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು (ಫೆಬ್ರವರಿ 09) ಡಿಮಸ್ಟರಿಂಗ್ ಕಾರ್ಯ ನಡೆಯಿತು ಹಾಗೂ ಇದೇ ಶಾಲೆಯಲ್ಲಿ ಫೆಬ್ರವರಿ 11 ರಂದು ಬೆಳಿಗ್ಗೆ 8.00 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ABOUT THE AUTHOR

...view details