ಕರ್ನಾಟಕ

karnataka

ETV Bharat / state

ತೋಟಗಾರಿಕಾ ಬೆಳೆಗಳಿಗೆ ಇನ್ಮುಂದೆ ಅರ್ಕಾ ಎಂಬ ಹೆಸರು! - ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ

ಅರ್ಕಾ ಎಂಬ ನಾಮಾಂಕಿತವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಎಲ್ಲಾ ತಂತ್ರಜ್ಞಾನಗಳು, ತಳಿಗಳು ಮತ್ತು ಉತ್ಪನ್ನಗಳ ಮೂಲ ಹೆಸರನ್ನಾಗಿ ಬಳಸಲಾಗುತ್ತಿದ್ದು, ಆಯಾ ವಸ್ತುಗಳಿಗೆ ಅರ್ಕಾದೊಂದಿಗೆ ಜೋಡಿಸಿ ಕರೆಯಲಾಗುತ್ತದೆ ಎಂದು ಬೆಂಗಳೂರು ಸಂಸ್ಥೆಯ ನಿರ್ದೇಶಕರು ಎಂ ಆರ್ ದಿನೇಶ್ ತಿಳಿಸಿದರು.

ತೋಟಗಾರಿಕಾ ಬೆಳೆಗಳಿಗೆ ಇನ್ಮುಂದೆ ಅರ್ಕಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

By

Published : Aug 24, 2019, 7:48 AM IST

ಬೆಂಗಳೂರು: ಇಲ್ಲಿಗೆ ಸಮೀಪದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ 5 ದಶಕಗಳ ನಿರಂತರ ಸಂಶೋಧನೆಗಳ ಫಲವಾಗಿ ಹಣ್ಣಿನ ಬೆಳೆಗಳು, ತರಕಾರಿ ಮತ್ತು ಹೂವಿನ ಬೆಳೆಗಳಲ್ಲಿ ಹಲವಾರು ತಂತ್ರಜ್ಞಾನಗಳು ಮತ್ತು ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ.

ತೋಟಗಾರಿಕಾ ಬೆಳೆಗಳಿಗೆ ಇನ್ಮುಂದೆ ಅರ್ಕಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ..

ಅರ್ಕಾ ಎಂಬ ನಾಮಾಂಕಿತವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಎಲ್ಲಾ ತಂತ್ರಜ್ಞಾನಗಳು, ತಳಿಗಳು ಮತ್ತು ಉತ್ಪನ್ನಗಳ ಮೂಲ ಹೆಸರನ್ನಾಗಿ ಬಳಸಲಾಗುತ್ತಿದ್ದು, ಆಯಾ ವಸ್ತುಗಳಿಗೆ ಅರ್ಕಾದೊಂದಿಗೆ ಜೋಡಿಸಿ ಕರೆಯಲಾಗುತ್ತದೆ ಎಂದು ಬೆಂಗಳೂರು ಸಂಸ್ಥೆಯ ನಿರ್ದೇಶಕರು ಎಂ ಆರ್ ದಿನೇಶ್ ತಿಳಿಸಿದರು.

ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟಗಳ ನಿರ್ವಹಣೆ ಮತ್ತು ಸಮಗ್ರ ರೋಗಗಳ ನಿರ್ವಹಣಾ ವಿಧಾನಗಳು, ಮಣ್ಣಿನ ಜೀವಾಣುಗಳ ಸಮ್ಮಿಶ್ರಣಗಳು, ಮೌಲ್ಯವರ್ಧನೆಗಳು, ಜೈವಿಕ ಪೀಡೆನಾಶಕಗಳು ಮುಂತಾದ ಸಂಶೋಧನೆಗಳು ಭಾರತ ದೇಶದ ಉದ್ದಗಲಕ್ಕೂ ಹರಡಿ ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಲಾಭಾಂಶವನ್ನು ತಂದು ಕೊಟ್ಟಿದೆ. ಸಂಸ್ಥೆಯ ಸಿಬ್ಬಂದಿ ತಮ್ಮ ಪ್ರಯತ್ನಗಳಿಂದಾಗಿ ಹಲವಾರು ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಬಹಳಷ್ಟು ರೈತರು ಅಳವಡಿಸಿ ಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ತಂತ್ರಜ್ಞಾನ ನಿರ್ವಹಣಾ ಘಟಕವು 2008-09 ರಲ್ಲಿ ತನ್ನ ಕಾರ್ಯಾರಂಭ ಮಾಡಿ ಭಾರತೀಯ ಕೃಷಿ ಸಂಶೋಧನಾ ಪರಿಷತ್​ನ ಐಪಿ ನಿಯಮಾವಳಿಗಳ ಭಾಗವಾಗಿ ಹಲವಾರು ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಿ ನೂರಕ್ಕೂ ಹೆಚ್ಚು ವಾರಸುದಾರರಿಗೆ ಲೈಸೆನ್ಸ್ ನೀಡಿದೆ. ಇದರಿಂದಾಗಿ ಕಳೆದ ದಶಕದಲ್ಲೇ 9 ಕೋಟಿ ರೂಪಾಯಿಗಳಷ್ಟು ಆದಾಯವು ಐಪಿ ನಿಯಮದಡಿಯಲ್ಲಿ ಐಐಹೆಚ್‌ಆರ್ ಸಂಸ್ಥೆಗೆ ದೊರಕಿದೆ ಎಂದರು.

ಲೈಸೆನ್ಸ್ ಹೊರತುಪಡಿಸಿದ ಇತರ ತಂತ್ರಜ್ಞಾನ ನಿರ್ವಹಣಾ ವಿಧಾನದಿಂದಾಗಿ ವಿಶೇಷ ಒಡಂಬಡಿಕೆಯನ್ನು ಸಂಸ್ಥೆ ಹಾಗೂ ಲೈಸೆನ್ಸ್‌ದಾರರ ನಡುವೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮುಂಚೂಣಿಯ ತಂತ್ರಜ್ಞಾನಗಳ ಶುಲ್ಕ ಮತ್ತು ವಾರ್ಷಿಕ ಗೌರವಧನ ಶೇಕಡಾ 2-5 ರಷ್ಟು ಮೊತ್ತವು, 5-10ವರ್ಷಗಳ ಒಡಂಬಡಿಕೆಯಲ್ಲಿ ಸೇರಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ತಂತ್ರಜ್ಞಾನಗಳು ಲೈಸೆನ್ಸ್​ದಾರರಿಗೆ ಉತ್ಪನ್ನಗಳನ್ನು ತಯಾರಿಸಲು ವಿಶೇಷವಾಗಿ ಸೌಲಭ್ಯ ಒದಗಿಸಲಾಗಿದೆ. ಇದರಿಂದಾಗಿ ಸ್ಟಾರ್ಟ್ ಅಪ್‌ಗಳು ಮತ್ತು ಉದ್ದಿಮೆದಾರರು ತೋಟಗಾರಿಕೆ ತಂತ್ರಜ್ಞಾನ ಆಧಾರಿತ ವ್ಯವಹಾರ ವಹಿವಾಟುಗಳನ್ನು ನಡೆಸಿ ಯಶಸ್ವಿ ಆರ್ಥಿಕ ಲಾಭ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಕಾ ಎಂಬ ಹೆಸರು, ಈ‌ ಹಿಂದೆ ಸಂಸ್ಥೆಯ ಸಮೀಪ ಹರಿಯುತ್ತಿದ್ದ ಅರ್ಕಾವತಿ ನದಿಯಿಂದಾಗಿ ಸಂಬಂಧಿಸಿದೆ ಎಂದು ಅವರು ಹೇಳಿದರು.

ABOUT THE AUTHOR

...view details