ದೊಡ್ಡಬಳ್ಳಾಪುರ: ಪ್ರವಾಸಕ್ಕೆ ತೆರಳಿದ ಸಮಯದಲ್ಲಿ ರಸ್ತೆಯಲ್ಲಿ ಒಂದು ಲಕ್ಷ ಮೌಲ್ಯದ ಐಪ್ಯಾಡ್ ಯುವಕನಿಗೆ ಸಿಕ್ಕಿದ್ದು, ಆದರ ಮಾಲೀಕನನ್ನು ಪತ್ತೆ ಮಾಡಿದ ಯುವಕ ಐಪ್ಯಾಡ್ ಮಾಲೀಕರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾನೆ.
ರಸ್ತೆಯಲ್ಲಿ ಸಿಕ್ಕ ಲಕ್ಷ ಮೌಲ್ಯದ ಐಪ್ಯಾಡ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ - ರಸ್ತೆಯಲ್ಲಿ ಸಿಕ್ಕ ಲಕ್ಷ ಮೌಲ್ಯದ ಐಪ್ಯಾಡ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಯುವಕ
ಪ್ರವಾಸಕ್ಕೆ ತೆರಳಿದ್ದಾಗ ಸಿಕ್ಕ ಲಕ್ಷ ಮೌಲ್ಯದ ಐಪಾಡ್ನ್ನು ಅದರ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದ ಯುವಕ.
ಫೆಬ್ರವರಿ 14 ರಂದು ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಗ್ರಾಮದ ಶೇಖರ್ ಕುಟುಂಬ ಸಮೇತ ಉಡುಪಿ ಪ್ರವಾಸ ಕೈಗೊಂಡಿದ್ದರು, ಪ್ರವಾಸ ಮುಗಿಸಿ ಹಿಂತಿರುಗಿ ಬರುವ ವೇಳೆ ಕಾರ್ಕಳ ಸಮೀಪದ ರಸ್ತೆಯಲ್ಲಿ ಐಪ್ಯಾಡ್ ಸಿಕ್ಕಿದೆ. ಊರಿಗೆ ತೆರಳಿದ ನಂತರ ಐಪ್ಯಾಡ್ ಚಾರ್ಜ್ಮಾಡಿ ಐಪ್ಯಾಡ್ ಮಾಲೀಕನನ್ನ ಪತ್ತೆ ಮಾಡಿದ್ದಾನೆ. ಐಪ್ಯಾಡ್ ಮಂಗಳೂರು ಮೂಲದ ವಿಜಯಕುಮಾರ್ ತಿಳಿದು ಬಂದಿದೆ.
ಐಪ್ಯಾಡ್ ಕಳೆದುಕೊಂಡಿರುವ ಬಗ್ಗೆ ವಿಜಯಕುಮಾರ್ ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐಪ್ಯಾಡ್ ಕಳೆದಿರುವ ಕುರಿತು ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮಾಹಿತಿಯಿಂದ ವಿಜಯಕುಮಾರ್ ಅವರಿಗೆ ಉಮೇಶ್ ಐಪ್ಯಾಡ್ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮರೆದಿದ್ದಾರೆ.
ಇದನ್ನೂ ಓದಿ:ಮಳೆ ಬೆಳೆ ಸಂಪಾದೀತಲೇ ಪರಾಕ್; ಮೈಲಾರದಲ್ಲಿ ಅದ್ಧೂರಿ ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದ ಭಕ್ತರು