ನೆಲಮಂಗಲ: ವಿದೇಶದಿಂದ ಬಂದಿದ್ದ ಇಬ್ಬರು ಯುವಕರು 'ಸಿ' ಕ್ಯಾಟಗರಿ ಅಡಿಯಲ್ಲಿ ಹೋಮ್ ಕ್ವಾರಂಟೇನ್ಗೆ ಒಳಗಾಗಿದ್ದು, ಭಾನುವಾರ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಹೋಮ್ ಕ್ವಾರಂಟೇನ್ ಒಳಾಗದ ಯುವಕರು ಸಾರ್ವಜನಿಕವಾಗಿ ಓಡಾಟ - ನೆಲಮಂಗಲ ಸುದ್ದಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದ ವೈದ್ಯರು ಹೊರಗಡೆ ಎಲ್ಲಿಯೂ ಓಡಾಡದಂತೆ ಎಚ್ಚರಿಕೆ ನೀಡಿದ್ದರು. ಯುವಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸಾರ್ವಜನಿಕವಾಗಿ ನಿನ್ನೆ ಹೊರ ಬಂದಿದ್ದಾರೆ. ಸ್ಥಳೀಯರು ಅವರ ಕೈ ಮೇಲಿನ ಸ್ಟ್ಯಾಂಪಿನ ಗುರುತು ಪತ್ತೆಹಚ್ಚಿ ಸಮೀಪದ ಆರೋಗ್ಯ ಇಲಾಖೆಗೆ ದೂರು ನೀಡಿದರು.
ನೆಲಮಂಗಲ ಆಸ್ಪತ್ರೆಯ ಸಿಬ್ಬಂದಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದ ವೈದ್ಯರು ಹೊರಗಡೆ ಎಲ್ಲಿಯೂ ಓಡಾಡದಂತೆ ಎಚ್ಚರಿಕೆ ನೀಡಿದ್ದರು. ಯುವಕರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸಾರ್ವಜನಿಕವಾಗಿ ನಿನ್ನೆ ಹೊರ ಬಂದಿದ್ದಾರೆ. ಸ್ಥಳೀಯರು ಅವರ ಕೈ ಮೇಲಿನ ಸ್ಟ್ಯಾಂಪ್ ಗುರುತು ಪತ್ತೆಹಚ್ಚಿ ಸಮೀಪದ ಆರೋಗ್ಯ ಇಲಾಖೆಗೆ ದೂರು ನೀಡಿದರು.
ಸ್ಥಳೀಯರ ದೂರಿನ ಮೇಲೆ ಈ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಐಸೋಲೇಷನ್ ವಾರ್ಗಳಲ್ಲಿ ಇರಿಸಿದ್ದಾರೆ.