ಕರ್ನಾಟಕ

karnataka

ETV Bharat / state

ಐತಿಹಾಸಿಕ ನಲ್ಲೂರು ಕೋಟೆ ಗಂಗಮ್ಮದೇವಿಯ ಅದ್ಧೂರಿ ಜಾತ್ರಾ ಮಹೋತ್ಸವ - undefined

ನಲ್ಲೂರು ಕೋಟೆಯ ಗಂಗಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯು ಅನಾದಿ ಕಾಲದಿಂದಲೂ ಅಂದರೆ ಚೋಳರ ಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಿಕ ಪದ್ಧತಿಯಾಗಿದೆ. 13 ಊರಿನ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರು, ಮಾರ್ಗದರ್ಶಿಗಳು ಸೇರಿ ಈ ಜಾತ್ರೆ ನಡೆಸುತ್ತಾರೆ.

ಗಂಗಮ್ಮದೇವಿ

By

Published : Apr 26, 2019, 5:37 PM IST

ಬೆಂಗಳೂರು:ಐತಿಹಾಸಿಕ ನಲ್ಲೂರು ಕೋಟೆಯ ಗಂಗಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯನ್ನು 13 ಊರುಗಳು ಸೇರಿಕೊಂಡು ಮಾಡುವುದು ವಿಶೇಷ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಟಿಪ್ಪು ಕೋಟೆ ಎಷ್ಟು ಪ್ರಸಿದ್ಧಿ ಮತ್ತು ಇತಿಹಾಸ ಹೊಂದಿದೆಯೋ ಹಾಗೆಯೇ ನಲ್ಲೂರು ಕೋಟೆಯ ಶ್ರೀ ಗಂಗಾಮದೇವಿ ದೇವಸ್ಥಾನವೂ ಸುಪ್ರಸಿದ್ಧ. ಇಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಜಾತ್ರೆಯನ್ನು ಸುತ್ತಮುತ್ತಲಿನ 13 ಗ್ರಾಮದ ಜನರು ಸೇರಿ ಆಚರಿಸುತ್ತಾರೆ.

ಏಪ್ರಿಲ್ ತಿಂಗಳ 24, 25 ಮತ್ತು 26ರಂದು ಮೂರು ದಿನಗಳ ಕಾಲ ನಡೆಯಿತು. ನಲ್ಲೂರು ಕೋಟೆಯ ಗಂಗಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯು ಅನಾದಿಕಾಲದಿಂದಲೂ ಅಂದರೆ ಚೋಳರ ಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಿಕ ಪದ್ಧತಿಯಾಗಿದೆ. 13 ಊರಿನ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರು, ಮಾರ್ಗದರ್ಶಿಗಳು ಸೇರಿ ಈ ಜಾತ್ರೆ ನಡೆಸುತ್ತಾರೆ. ನಲ್ಲೂರು, ಹೊಸನಲ್ಲೂರು ಬಾಲೇಪುರ, ಚೊನ್ನಹಳ್ಳಿ, ಬಿದಲುಪುರ, ಮಲ್ಲೇನಹಳ್ಳಿ, ರೆಡ್ಡಿಹಳ್ಳಿ ದೊಡ್ಡಹೊಸಹಳ್ಳಿ, ಚಿಕ್ಕಹೊಸಹಳ್ಳಿ, ದೇವನಾಯಕನಹಳ್ಳಿ, ನಲ್ಲಪ್ಪನಹಳ್ಳಿ, ಮಲ್ಲೇಪುರ ಮತ್ತು ಅರಸಿನಕುಂಟೆ ಗ್ರಾಮಗಳ ಜನರು ಒಟ್ಟಾಗಿ ಐತಿಹಾಸಿಕ ದೇವಿಯ ಜಾತ್ರೆಗೆ ಸಾಕ್ಷಿಯಾದರು.

ಕೋಟೆ ಗಂಗಮ್ಮದೇವಿ ಜಾತ್ರೆ

ಪ್ರತಿ ಊರಿನಲ್ಲೂ ಅದ್ದೂರಿಯಾಗಿ ಗಂಗಮ್ಮ ದೇವಿಯ ಜಾತ್ರೆಯನ್ನು ಮಾಡಿದ್ರು. ಏಪ್ರಿಲ್ 24ರಂದು ಈ ದಿನ ಉತ್ಸವದಲ್ಲಿ 13 ಊರುಗಳಿಂದ ತಮ್ಮ ತಮ್ಮ ಮನೆಗಳಲ್ಲಿ ಹಲವಾರು ಹೂವುಗಳಿಂದ ಅಲಂಕೃತ ದೀಪವನ್ನು ತಯಾರಿಸಿ ಹಾಗೂ ಗ್ರಾಮ ದೇವರುಗಳನ್ನು ಹೂವಿನಿಂದ ಅಲಂಕರಿಸಿ ಅಲಂಕೃತವಾದ ವಿಧ ವಿಧವಾದ ರೀತಿಯ ಪಲ್ಲಕ್ಕಿಯಲ್ಲಿಟ್ಟು ಸಿದ್ಧತೆ ಮಾಡಿಕೊಂಡು ದೇವಿಯ ಸನ್ನಿಧಿಗೆ ಬಂದರು. ಅದೇ ರೀತಿ ನಿನ್ನೆ ಅಂದರೆ ಏಪ್ರಿಲ್ 25ರ ಬೆಳಗಿನ ಜಾವ ಪ್ರತಿ ಊರಿನವರು ಗಂಗಮ್ಮ ದೇವರ ಮಂದಿರದ ಮುಂದೆ ಮೊದಲೇ ಸಿದ್ಧಪಡಿಸಿದ್ದ ಅಗ್ನಿ ಕುಂಡದಲ್ಲಿ ತಮ್ಮ ತಮ್ಮ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದುಕೊಂಡು ಹೋಗಿ ತಾಯಿ ಗಂಗಮ್ಮ ದೇವಿಗೆ ಹರಕೆ ಅರ್ಪಿಸಿ ಪೂರ್ಣಗೊಳಿಸಿದರು. ಇದು ಪ್ರತಿ ಬಾರಿಯ ಜಾತ್ರೆಯಲ್ಲಿ ನಡೆಯುವ ಸಂಪ್ರದಾಯ. ಈ ರೀತಿ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಅಲ್ಲದೇ ಇದರಿಂದ ಯಾರಿಗೂ ಗಾಯಗಳಾಗುವುದಿಲ್ಲ. ಅದೇ ರೀತಿ ಅಗ್ನಿ ಕುಂಡದಲ್ಲಿ ಹೋದವರಿಗೆ ಯಾವುದೇ ನೋವು ಉಂಟಾಗಿಲ್ಲ.

ದೀಪೋತ್ಸವದ ಬಳಿಕ ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬಂಧು ಬಾಂಧವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾರನೇಯ ದಿನ ಅಂದರೆ 26ರಂದು ಜಾತ್ರೆಗೆ ಬೇರೆ ಬೇರೆ ಊರುಗಳಿಂದ ಬಂದಿರುವ ಸಂಬಂಧಿಗಳು, ಸ್ನೇಹಿತರು ಕುಟುಂಬಸ್ಥರು ಜಾತ್ರೆಯಲ್ಲಿ ಪಾಲ್ಗೊಂಡರು. ವಿಶೇಷವಾಗಿ ಕೆಲವರು ಬಾಯಿಗೆ ಬೀಗ ಹಾಕಿಕೊಳ್ಳುವುದರ ಮೂಲಕ ಗಂಗಮ್ಮ ದೇವಿಗೆ ಹರಕೆ ತೀರಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು. ಇದರ ಜೊತೆಯಲ್ಲಿ ಪಾನಕ, ಮಜ್ಜಿಗೆಯನ್ನು ಪ್ರತಿ ಗ್ರಾಮದವರು ಜಾತ್ರೆಗೆ ಬರುವವರಿಗೆ ನೀಡಿ ಬೇಸಿಗೆಯ ಬಿಸಿಯಲ್ಲಿ ನೆರವಾದರು.

For All Latest Updates

TAGGED:

ABOUT THE AUTHOR

...view details