ದೇವನಹಳ್ಳಿ:ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಮುಂದಿನ ಸಿಎಂ ಯಾರು ಎಂಬುದು ಕುತೂಹಲಕಾರಿಯಾದ ಪ್ರಶ್ನೆಯಾಗಿದೆ. ಆದರೆ ಮಾಜಿ ಸಚಿವರಾದ ಪ್ರಭು ಚೌಹಣ್ ಮುಂದಿನ ಸಿಎಂ ಮತ್ತು ಸಚಿವರ ಆಯ್ಕೆಯನ್ನ ಹೈಕಮಾಂಡ್ ಮಾಡಲಿದೆ ಎಂದರು.
ಯಡಿಯೂರಪ್ಪ ರವರ ರಾಜೀನಾಮೆಯಿಂದ ಮಾಜಿ ಸಚಿವರಾದ ಪ್ರಭು ಚೌಹಣ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೈದರಾಬಾದ್ ಮೂಲಕ ಬೀದರ್ಗೆ ಪ್ರಯಾಣ ಬೆಳೆಸಿದರು. ಇದೇ ಮಾಧ್ಯಮದೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮವಾದ ನಿರ್ಧಾರಗಳನ್ನ ತೆಗೆದುಕೊಳ್ಳುವುದರ ಮೂಲಕ 2 ವರ್ಷ ಉತ್ತಮ ಆಡಳಿತ ನೀಡಿದ್ದಾರೆ. 6 ಕೋಟಿ ಜನರ ಸೇವೆ ಮಾಡಿದ್ದಾರೆ. ಅವರ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ, ಅವರ ಭಾಷಣದಲ್ಲಿ ಹೇಳಿದಂತೆ ಸ್ವಯಂ ಪ್ರೇರಿತವಾಗಿ ವಯಸ್ಸಿನ ಕಾರಣ ನೀಡಿ ಅವರೆ ರಾಜಿನಾಮೆ ನೀಡಿದ್ದಾರೆ.
ಮುಂದಿನ ಸಿಎಂ, ಸಚಿವರನ್ನು ಹೈಕಮಾಂಡ್ ಆಯ್ಕೆ ಮಾಡಲಿದೆ: ಪ್ರಭು ಚೌಹಣ್
ಮುಂದಿನ ಸಿಎಂ ಯಾರು ಎಂಬುದು ಮತ್ತು ಸಚಿವರ ಆಯ್ಕೆಯನ್ನ ಹೈಕಮಾಂಡ್ ನಿರ್ಧಾರ ಮಾಡಲಿದೆ, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ, ಮುಂಬರುವ ಮುಖ್ಯಮಂತ್ರಿ ಸಹ 6 ಕೋಟಿ ಕನ್ನಡಿಗರ ಸೇವೆ ಮಾಡಲಿದ್ದಾರೆ ಎಂದರು
ಪ್ರಭು ಚೌಹಣ್
ಮುಂದಿನ ಸಿಎಂ ಯಾರು ಎಂಬುದು ಮತ್ತು ಸಚಿವರ ಆಯ್ಕೆಯನ್ನ ಹೈಕಮಾಂಡ್ ನಿರ್ಧಾರ ಮಾಡಲಿದೆ, ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ, ಮುಂಬರುವ ಮುಖ್ಯಮಂತ್ರಿ ಸಹ 6 ಕೋಟಿ ಕನ್ನಡಿಗರ ಸೇವೆ ಮಾಡಲಿದ್ದಾರೆ ಎಂದರು
ಇದನ್ನು ಓದಿ: ಸಚಿವ ಶ್ರೀ ರಾಮುಲುಗೆ ಈ ಬಾರಿ ಡಿಸಿಎಂ ಪೋಸ್ಟ್ ಖಚಿತ : ಹೈಕಮಾಂಡ್ ನಿಂದ ಖುದ್ದು ವಾಗ್ದಾನ