ಕರ್ನಾಟಕ

karnataka

ETV Bharat / state

Bengaluru Rain: ಯಲಹಂಕದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಅವಾಂತರ - heavy rain in bengaluru

ಬೆಂಗಳೂರಿನ ಯಲಹಂಕದಲ್ಲಿ(bengaluru rain) ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

heavy-rain-in-yalahanka
Yalahanka Rain: ಯಲಹಂಕದಲ್ಲಿ ವರುಣಾರ್ಭಟಕ್ಕೆ ಹಲವೆಡೆ ಅವಾಂತರ

By

Published : Nov 22, 2021, 9:17 AM IST

Updated : Nov 22, 2021, 10:46 AM IST

ಯಲಹಂಕ (ಬೆಂಗಳೂರು):ನಿನ್ನೆ ಸಂಜೆ 6ರಿಂದ ರಾತ್ರಿ 11 ಗಂಟೆವರೆಗೂ ಸುರಿದ ಭಾರಿ ಮಳೆಯಿಂದ ಯಲಹಂಕದ (Heavy rain in bengaluru) ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.

ಬೈಕ್​ ಸವಾರನ ಪರದಾಟ

ಯಲಹಂಕ ನಗರದಲ್ಲಿ(Rain in yalahanka) ನಿನ್ನೆ ಸಂಜೆ ಸತತ ನಾಲ್ಕೈದು ತಾಸು ಸುರಿದ ಮಳೆಗೆ ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಭಾರಿ ಮಳೆಯಿಂದ ಯಲಹಂಕ ರೈಲ್ವೆ ಅಂಡರ್ಪಾಸ್ (ಹೈಸ್ಕೂಲ್ ಕಾಂಪೌಂಡ್), ಯಲಹಂಕ ಉಪನಗರದ ಚಿಕ್ಕಬೊಮ್ಮಸಂದ್ರ, ಸುರಭಿಲೇಔಟ್, ಸಪ್ತಗಿರಿ ಲೇಔಟ್ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಯಲಹಂಕದಲ್ಲಿ ವರುಣಾರ್ಭಟ

ವರುಣನ ಆರ್ಭಟಕ್ಕೆ ಏರ್​​ಪೋರ್ಟ್ ರಸ್ತೆ, ಕೋಗಿಲು ಕ್ರಾಸ್, ಪೊಲೀಸ್ ಠಾಣೆ ವೃತ್ತಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.

ಇದನ್ನೂ ಓದಿ:ಪಠಾಣ್​ಕೋಟ್​ ಸೇನಾ ಗೇಟ್​ ಬಳಿ ಗ್ರೆನೇಡ್​​ ಸ್ಫೋಟ.. ಹೈ ಅಲರ್ಟ್​ ಘೋಷಣೆ

Last Updated : Nov 22, 2021, 10:46 AM IST

ABOUT THE AUTHOR

...view details