ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಕೊರೊನಾ ಲಸಿಕೆಗಾಗಿ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ವ್ಯಾಕ್ಸಿನ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತರೂ, ಸರಿಯಾಗಿ ಲಸಿಕೆ ಸಿಗುತ್ತಿಲ್ಲ. ಆದ್ರೆ, ಇಲ್ಲೊಬ್ಬ ಆರೋಗ್ಯ ಸಹಾಯಕಿ ಮಾತ್ರ ಹಣ ಕೊಟ್ರೆ ಕ್ಷಣದಲ್ಲೇ ಲಸಿಕೆ ಹಾಕ್ತಾರೆ. ಈ ಬಗ್ಗೆ ಮಾಹಿತಿ ತಿಳಿದು ದಾಳಿ ನಡೆಸಿದ ತಹಶೀಲ್ದಾರ್ ಕೈಗೆ ಆರೋಪಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಅಧಿಕಾರಿಗಳು ಕ್ರಮಕ್ಕೆ ಮುಂದಾದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆರೋಪಿ ಹೈಡ್ರಾಮ ಮಾಡಿದ್ದಾಳೆ.
‘ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ, ಸಿಕ್ಕಿಬಿದ್ದ ಆರೋಪಿ’
ನೆಲಮಂಗಲದ ಅರಿಶಿನಕುಂಟೆ ಉಪ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕಿ ಗಾಯತ್ರಿ, ವ್ಯಾಕ್ಸಿನ್ ಕದ್ದು ಬೇರೆಯವರಿಗೆ ನೀಡುವಾಗ ಅಧಿಕಾರಿಗಳಿಗೆ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಾರೆ. ಈಕೆ ತನಗೆ ಕೊಟ್ಟಿರುವ ವ್ಯಾಕ್ಸಿನ್‌ಗಳನ್ನು ಸರ್ಕಾರದ ನಿಯಮ ಮೀರಿ ಬೇರೊಬ್ಬರಿಗೆ ನೀಡಿ ಹಣ ಪಡೆಯುತ್ತಿದ್ದಳಂತೆ. ಈ ಬಗ್ಗೆ ದೂರು ಬಂದ ಹಿನ್ನೆಲೆ ನೆಲಮಂಗಲ ತಹಶೀಲ್ದಾರ್ ಕೆ.ಮಂಜುನಾಥ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ವ್ಯಾಕ್ಸಿನ್ ಮಾರಾಟ ಮಾಡಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
‘ನೀವು ಕ್ರಮ ತಗೊಂಡ್ರೆ ನಾನ್ ಸತ್ತೋಗ್ತಿನಿ’