ನೆಲಮಂಗಲ: ಕರ್ನಾಟಕದಲ್ಲಿ ರಾಷ್ಪ್ರೀಯ ಪೌರತ್ವ ನೊಂದಣಿ ಜಾರಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದ, ಪತ್ತೆಯಾದ ಅಕ್ರಮ ವಲಸಿಗರನ್ನು ಇಡಲು ಬೆಂಗಳೂರಿನ ಹೊರವಲಯದಲ್ಲಿ ಬಂಧನ ಕೇಂದ್ರ ಬೆಂಗಳೂರು ಹೊರವಲಯದಲ್ಲಿ ಈಗಾಗಲೇ ತಲೆ ಎತ್ತಿದೆ.
ಅಸ್ಸೋಂನಂತೆ ಬೆಂಗಳೂರಿನಲ್ಲೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಇದರ ಪರ ಮತ್ತು ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ಒಳನುಸುಳುಕೋರರಿಗಾಗಿ ತಲೆ ಎತ್ತಿದ ಬಂಧನ ಕೇಂದ್ರ! - ಪೌರತ್ವ ತಿದ್ದುಪಡಿ ಕಾಯ್ದೆ
ದೇಶಕ್ಕೆ ಅಕ್ರಮವಾಗಿ ನುಗ್ಗಿರುವ ಒಳನುಸುಳುಕೋರರಿಗಾಗಿ ಬೆಂಗಳೂರು ಹೊರವಲಯದ ನೆಲಮಂಗಲ ಬಳಿ ಕಟ್ಟಡ ನಿರ್ಮಿಸಲಾಗಿದೆ.
ಒಳನುಸುಳುಕೋರರಿಗಾಗಿ ತಲೆ ಎತ್ತಿದ ಡಿಟೆನ್ಷನ್ ಸೆಂಟರ್!
ಇದರ ನಡುವೆ ನೆಲಮಂಗಲ ಸಮೀಪದ ಸೊಂಡೆಕೊಪ್ಪ ರಸ್ತೆಯಲ್ಲಿ ಅಕ್ರಮ ವಲಸಿಗರ ಮತ್ತು ನಿರಾಶ್ರಿತರ ಶಿಬಿರದ ಕಟ್ಟಡ ಪೂರ್ಣಗೊಂಡಿದೆ.