ದೊಡ್ಡಬಳ್ಳಾಪುರ/ಬೆಂಗಳೂರು ಗ್ರಾಮಾಂತರ: ಮುಂಬರುವ ನಗರಸಭೆ, ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆ ತಾಲೂಕು ಜೆಡಿಎಸ್ ಘಟಕದಲ್ಲಿದ್ದ ಬಣಗಳು ಒಂದಾಗಿವೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಂಧಾನದಲ್ಲಿ ಜೆಡಿಎಸ್ನ ಮುನೇಗೌಡ ಬಣ ಮತ್ತು ಅಪ್ಪಯ್ಯಣ್ಣನವರ ಬಣ ಪರಸ್ಪರ ಒಂದಾಗಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೆಣೆದಿದ್ದಾರೆ.
ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಮುನೇಗೌಡ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಪ್ಪಯ್ಯಣ್ಣ ಬಣಗಳ ನಡುವಿನ ಭಿನ್ನಾಭಿಪ್ರಾಯದಿಂದ ತಾಲೂಕು ಜೆಡಿಎಸ್ ಘಟಕದಲ್ಲಿ ಬಿರುಕು ಉಂಟಾಗಿತ್ತು.
ತಾಲೂಕು ಟಿಎಪಿಎಂಸಿಯಲ್ಲಿ ನಡೆದ ಚುನಾವಣೆಯಲ್ಲಿ ಮುನೇಗೌಡ ಮತ್ತು ಅಪ್ಪಯ್ಯಣ್ಣ ಬಣದ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರು. ಎರಡೂ ಬಣಗಳ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದ ಕಾರಣದಿಂದ ದೂರವಾಗಿಯೇ ಇದ್ದರು.