ಕರ್ನಾಟಕ

karnataka

ETV Bharat / state

ಗುಜರಾತ್ ಫಲಿತಾಂಶ ರಾಜ್ಯಕ್ಕೆ ಅನ್ವಯವಾಗಲ್ಲ: ಹೆಚ್ ಡಿ ಕುಮಾರಸ್ವಾಮಿ - Himachal election result 2022

ಗುಜರಾತ್​ನಲ್ಲಿ ವಿರೋಧ ಪಕ್ಷಗಳು ಎನ್ನುವಂಥದ್ದು ಕಳೆದ ಐದು ವರ್ಷಗಳಿಂದ ಇರಲಿಲ್ಲ. ಆದ್ದರಿಂದ ಗುಜರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೊ ಗೊತ್ತಿರುವ ವಿಷಯವಾಗಿತ್ತು. ರಾಜ್ಯದ ಮುಖ್ಯಮಂತ್ರಿಗಳು ಗುಜರಾತ್ ಫಲಿತಾಂಶ ರಾಜ್ಯಕ್ಕೂ ತಟ್ಟುತ್ತದೆ ಅಂದಿದ್ದಾರೆ. ಆದರೆ ಗುಜರಾತ್​ನಲ್ಲಿರುವ ವಾತವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

HD KUMARASWAMY GUJARATH RESULT REACTION
ಗುಜಾರತ್ ಫಲಿತಾಂಶ ರಾಜ್ಯಕ್ಕೆ ಅನ್ವಯವಾಗಲ್ಲ: ಹೆಚ್ ಡಿ ಕುಮಾರಸ್ವಾಮಿ

By

Published : Dec 8, 2022, 1:05 PM IST

Updated : Dec 8, 2022, 1:43 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಪ್ರತಿಕ್ರಿಯಿಸಿದ್ದಾರೆ. ದೇವನಹಳ್ಳಿ ವೇಣುಗೋಪಾಲಸ್ವಾಮಿ ದರ್ಶನ ಪಡೆದ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗುಜರಾತ್​ನ ಫಲಿತಾಂಶದ ಬಗ್ಗೆ ಮೊದಲೇ ಗೊತ್ತಿದ್ದುದೇ ಅಲ್ಲವೆ, ಅಲ್ಲಿಯ ಚುನಾವಣೆಗೆ ಸಂಬಂಧಿಸಿದಂತೆ ವಿಶೇಷವಾದ ವ್ಯಾಖ್ಯಾನ ಮಾಡಬೇಕೆಂದಿಲ್ಲ ಎಂದು ಬಿಜೆಪಿ ಗೆಲುವಿನ ಬಗ್ಗೆ ತಿಳಿಸಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ

ಗುಜರಾತ್​ನಲ್ಲಿ ವಿರೋಧ ಪಕ್ಷಗಳು ಎನ್ನುವಂಥದ್ದು ಕಳೆದ ಐದು ವರ್ಷಗಳಿಂದ ಇರಲಿಲ್ಲ. ಆದ್ದರಿಂದ ಗುಜಾರಾತ್ ಫಲಿತಾಂಶ ಏನಾಗಲಿದೆ ಎಂಬುದು ಮೊದಲೇ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಗುಜರಾತ್ ಫಲಿತಾಂಶ ರಾಜ್ಯಕ್ಕೂ ಅನ್ವಯಿಸುತ್ತದೆ ಅಂದಿದ್ದಾರೆ. ಆದರೆ ಗುಜರಾತ್​ನಲ್ಲಿರುವ ವಾತಾವಾರಣವೇ ಬೇರೆ, ರಾಜ್ಯದ ವಾತಾವರಣವೇ ಬೇರೆ. ಜೊತೆಗೆ ಈ ನಮ್ಮ ರಾಜ್ಯ ಸರ್ಕಾರದ ಕರ್ಮಕಾಂಡಗಳು ತಿಳಿದಿದೆಯಲ್ಲವೇ? ಇದರಿಂದ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಹಾಗಾಗಿ ಗುಜರಾತ್​ನ ಫಲಿತಾಂಶ ರಾಜ್ಯದಲ್ಲಿ ಕನಸು‌ ಕಂಡರೆ ಕನ್ನಡಿಗರು ಅದಕ್ಕೆ ಮಾರು ಹೋಗೋವವರಲ್ಲ ಎಂದು ಹೆಚ್​ ಡಿಕೆ ಟೀಕಿಸಿದರು.

ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಹೆಚ್​ ಡಿ ಕೆ ಮೊದಲಿನಿಂದಲೂ ಅಲ್ಲಿ ಒಂದು ಬಾರಿ ಕಾಂಗ್ರೆಸ್, ಒಂದು ಬಾರಿ ಬಿಜೆಪಿಗೆ ಅಧಿಕಾರ ಬರುತ್ತಿದೆ. ಅದೇ ಈ ಬಾರಿಯೂ‌ ಮರುಕಳಿಸಿದೆ ಎಂದರು.

ದೇವನಹಳ್ಳಿಯ ಇತಿಹಾಸ ಪ್ರಸಿದ್ದ ವೇಣುಗೋಪಾಲಸ್ವಾಮಿ ಲಕ್ಷ ದೀಪೋತ್ಸವ ಇಂದು ಇದ್ದುದರಿಂದ ಕುಮಾರಸ್ವಾಮಿ ದೇವರ ದರ್ಶನ‌ ಪಡೆದರು. ಹಾಗೆ ಇವರಿಗೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಾಥ್‌ ನೀಡಿದ್ದಾರೆ.

ಇದನ್ನೂ ಓದಿ:ಹಿಮಾಚಲದಲ್ಲಿ ಕಾಂಗ್ರೆಸ್​ ಮೇಲುಗೈ.. ಬಿಜೆಪಿಗೆ ಮುಳುವಾದ ಬಂಡಾಯ

Last Updated : Dec 8, 2022, 1:43 PM IST

ABOUT THE AUTHOR

...view details