ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ನಗರಸಭೆ ಹೆಸರಲ್ಲಿ ಗಣೇಶ ಮೂರ್ತಿ ಮಾರಾಟಗಾರರಿಂದ ಹಣ ವಸೂಲಿ - ಈಟಿವಿ ಭಾರತ ಕನ್ನಡ

ಐದು ಜನರ ಗುಂಪೊಂದು ನಗರಸಭೆ ಸೋಗಿನಲ್ಲಿ ಗಣೇಶ ಮೂರ್ತಿ ವ್ಯಾಪಾರಸ್ಥರ ಬಳಿ ಒಂದು ಸಾವಿರಾರು ರೂ ಹಣ ವಸೂಲಿ ಮಾಡಿದ್ದಾರೆ.

kn_bng_01_vasuli_avb_KA10057
ಗಣೇಶ ಮೂರ್ತಿ ಮಾರಾಟಗಾರ ಬಳಿ ಹಣ ವಸೂಲಿ ದಂಧೆ

By

Published : Aug 30, 2022, 10:59 PM IST

ದೊಡ್ಡಬಳ್ಳಾಪುರ: ನಗರಸಭೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿದ್ದವರ ಬಳಿ 5 ಜನರ ಗುಂಪೊಂದು ನಗರಸಭೆ ಹೆಸರಲ್ಲಿ ತಲಾ ಒಂದು ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ. ನಗರಸಭೆಯ ಮುಂಭಾಗದ ಕೋರ್ಟ್ ರಸ್ತೆಯಲ್ಲಿ 30ಕ್ಕೂ ಹೆಚ್ಚು ವ್ಯಾಪಾರಿಗಳು ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿದ್ದರು. ಈ ವೇಳೆ ಗುಂಪೊಂದು ಬಂದು, ನಾವು ನಗರಸಭೆಯಿಂದ ಸುಂಕ ವಸೂಲಿ ಮಾಡಲು ಟೆಂಡರ್ ತಗೆದುಕೊಂಡಿದ್ದೇವೆ, ಎರಡು ಸಾವಿರ ರೂ ಕೊಡಿ ಎಂದು ಹಣ ಕೇಳಿದ್ದಾರೆ.

ಇಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಾಗ ಅಂಗಡಿ ಖಾಲಿ ಮಾಡುವಂತೆ ದೌರ್ಜನ್ಯ ನಡೆಸಿದ್ದಾರೆ. ವಿಧಿ ಇಲ್ಲದೆ ಮಾರಾಟಗಾರರು ಒಂದು ಸಾವಿರ ರೂ ನೀಡಿದ್ದಾರೆ. ಸುಂಕ ಕೊಟ್ಪಿದ್ದಕ್ಕೆ ರಸೀದಿ ಕೊಟ್ಟಿಲ್ಲ. ನಿನ್ನೆ ಸುರಿದ ಮಳೆಯಿಂದಾಗಿ ಸಾವಿರಾರು ರೂಪಾಯಿ ನಷ್ಟವಾಗಿದೆ, ಈಗ ವಸೂಲಿ ದಂಧೆಯಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಿದ್ದೇವೆಂದು ಗಣೇಶ ಮೂರ್ತಿ ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಹುಲಿಹೈದರ ಪ್ರಕರಣ: ಗ್ರಾಮದಲ್ಲಿ ಗಣೇಶ ಹಬ್ಬ ಆಚರಣೆಗೆ ನಿರ್ಬಂಧ

ABOUT THE AUTHOR

...view details