ನೆಲಮಂಗಲ:17 ವರ್ಷ ದೇಶದ ಗಡಿ ಕಾದ ವೀರಯೋಧ ಶಿವಕುಮಾರಗೆ ನೆಲಮಂಗಲದ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ನೆಲಮಂಗಲ ಗ್ರಾಮಸ್ಥರು ಅರಿಶಿನಕುಂಟೆಯಿಂದ ನೆಲಮಂಗಲ ಪಟ್ಟಣದವರೆಗೆ ಬೆಳ್ಳಿ ರಥದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
17 ವರ್ಷ ದೇಶ ಕಾದು ನಿವೃತ್ತನಾದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ - ನಿವೃತ್ತ ಯೋಧನಿಗೆ ಗ್ರಾಮಸ್ಥರ ಸ್ವಾಗತ
ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯ ಯೋಧ ಶಿವಕುಮಾರ್ 17 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಪಡೆದು ಊರಿಗೆ ವಾಪಸ್ ಆಗಿದ್ದು, ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
![17 ವರ್ಷ ದೇಶ ಕಾದು ನಿವೃತ್ತನಾದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ grand welcome for retired soldier](https://etvbharatimages.akamaized.net/etvbharat/prod-images/768-512-11260118-thumbnail-3x2-nelamangala.jpg)
ನೆಲಮಂಗಲ ತಾಲೂಕಿನ ಹೊನ್ನರಾಯನಹಳ್ಳಿಯ ಯೋಧ ಶಿವಕುಮಾರ್ 17 ವರ್ಷ ದೇಶದ ರಕ್ಷಣೆಗಾಗಿ ಗಡಿ ಕಾದಿದ್ದರು. ಸೇವೆಯಿಂದ ನಿವೃತ್ತಿಯಾದ ಯೋಧ ಶಿವಕುಮಾರ್ ತವರೂರಿಗೆ ಆಗಮಿಸಿದರು. ಯೋಧ ಶಿವಕುಮಾರ್ ಅವರ ಆಗಮನವನ್ನು ಗ್ರಾಮದ ಯುವಕರು ಮತ್ತು ಕನ್ನಡಪರ ಸಂಘಟನೆಗಳು ಅದ್ದೂರಿಯಾಗಿ ಬರಮಾಡಿಕೊಂಡರು. ಬೆಳ್ಳಿ ರಥದಲ್ಲಿ ನೆಲಮಂಗಲದಿಂದ ಅರಿಶಿನಕುಂಟೆ ಗ್ರಾಮದವರೆಗೂ ಅದ್ಧೂರಿ ಮೆರವಣಿಗೆ ಮಾಡಿ ಅರತಿ ಬೆಳಗಿ ಸ್ವಾಗತ ಕೋರಿದರು.
ಕಾಶ್ಮೀರದ ಪುಲ್ವಾಮ, ಮಹಾರಾಷ್ಟ್ರದ ಮಥುರಾ, ಕಾರ್ಗಿಲ್ ಸೇರಿದಂತೆ ದೇಶದ ವಿವಿಧ ಕಡೆ 17 ವರ್ಷ ಯೋಧನಾಗಿ ಶಿವಕುಮಾರ್ ಸೇವೆ ಸಲ್ಲಿಸಿದ್ದಾರೆ, ಇದೇ ವೇಳೆ, ಮಾತನಾಡಿದ ಅವರು ದೇಶದ ಸೇವೆಗೆ ಅವಶ್ಯಕತೆ ಇದ್ದರೆ ಮತ್ತೆ ಸೈನಿಕನಾಗಿ ದೇಶ ರಕ್ಷಣೆ ಮಾಡಲು ಹೋಗುವುದಾಗಿ ಹೇಳಿದರು.