ದೊಡ್ಡಬಳ್ಳಾಪುರ :ರೈತರ ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಎಸ್ ಅಧಿಕಾರಿ ಮಹೇಶ್ ಬಾಬು ಎಂಬುವರಿಗೆ 25 ಸಾವಿರ ದಂಡ ವಿಧಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಪ್ರಕರಣ.. ಕೆಎಎಸ್ ಅಧಿಕಾರಿಗೆ ಕೋರ್ಟ್ ದಂಡ - undefined
ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಜಕ್ಕನಹಳ್ಳಿ ಗ್ರಾಮದ ರೈತ ಲಕ್ಷ್ಮಿ ನಾರಾಯಣಗೌಡಗೆ ಸೇರಿದ ಜಮೀನಿನನ್ನು ಉದ್ದೇಶ ಪೂರ್ವಕ್ಕಾಗಿ ಅಧಿಕಾರಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅಧಿಕಾರಿಗೆ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಜಕ್ಕನಹಳ್ಳಿ ಗ್ರಾಮದ ರೈತ ಲಕ್ಷ್ಮಿ ನಾರಾಯಣಗೌಡಗೆ ಸೇರಿದ ಜಮೀನಿನನ್ನು ಉದ್ದೇಶ ಪೂರ್ವಕ್ಕಾಗಿ ಅಧಿಕಾರಿ ಮುಟ್ಟುಗೋಲು ಹಾಕೊಕೊಳ್ಳಲು ಮುಂದಾಗಿದ್ದರು. ಈ ಸಂಬಂಧ ನಗರದ ಎಸಿ ಆಗಿದ್ದ ಮಹೇಶ್ ಬಾಬು ಕ್ರಮವನ್ನು ಪ್ರಶ್ನಿಸಿ ನಾರಾಯಣ ಗೌಡ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೆಎಎಸ್ ಅಧಿಕಾರಿ ಎನ್.ಮಹೇಶ್ ಬಾಬು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ದೇಶ ಪೂರ್ವಕವಾಗಿ ರೈತನ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲು ಕೋರ್ಟ್ ಆದೇಶಿಸಿತ್ತು. ವಿಚಾರಣೆ ನಂತರ ಮಹೇಶ್ ಬಾಬು ಪ್ರಮಾಣ ಪತ್ರ ಸಲ್ಲಿಸಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಕೋರ್ಟ್ ನ್ಯಾಯಾಂಗ ಬಂಧನ ಆದೇಶ ಹಿಂಪಡೆದಿದ್ದು, 24 ಗಂಟೆಯಲ್ಲಿ 25 ಸಾವಿರ ದಂಡ ಪಾವತಿಗೆ ಆದೇಶಿಸಿದೆ.