ಕರ್ನಾಟಕ

karnataka

ETV Bharat / state

ಡಿಎಲ್ ಅಭಿಯಾನದಲ್ಲಿ ಸರ್ಕಾರಿ ವೈದ್ಯನ ಹಗಲು ದರೋಡೆ..?? - ದೊಡ್ಡಬಳ್ಳಾಪುರ ಸರ್ಕಾರಿ ವೈದ್ಯ

ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ವೈದ್ಯ ಮೆಡಿಕಲ್ ಸರ್ಟಿಫಿಕೇಟ್ ಮಾಡಿಕೊಟ್ಟು ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ವೈದ್ಯರು ನಿರಾಕರಿಸಿದ್ದಾರೆ.

ಡಿಎಲ್ ಅಭಿಯಾನದಲ್ಲಿ ಸರ್ಕಾರಿ ವೈದ್ಯನ ಹಗಲು ದರೋಡೆ..??

By

Published : Sep 16, 2019, 10:38 PM IST

ನೆಲಮಂಗಲ: ಟ್ರಾಫಿಕ್ ನಿಯಮಗಳಿಂದಾಗಿ ಜನ ಬೆಚ್ಚಿಬಿದ್ದಿದ್ದು, ಪೊಲೀಸ್ ಇಲಾಖೆ ಆರಂಭಿಸಿರುವ ಡಿಎಲ್ ಮೇಳದಲ್ಲಿ ಮುಗಿಬಿದ್ದು ಡಿಎಲ್ ಮಾಡಿಸಿಕೊಳ್ಳುತ್ತಿದ್ದಾರೆ. ಇದೇ ಅವಕಾಶ ಬಳಸಿಕೊಂಡ ಸರ್ಕಾರಿ ವೈದ್ಯ ಮೆಡಿಕಲ್ ಸರ್ಟಿಫಿಕೇಟ್ ಮಾಡಿಕೊಟ್ಟು ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಆರೋಪವನ್ನು ವೈದ್ಯರು ನಿರಾಕರಿಸಿದ್ದಾರೆ.

ಡಿಎಲ್ ಅಭಿಯಾನದಲ್ಲಿ ಸರ್ಕಾರಿ ವೈದ್ಯನ ಹಗಲು ದರೋಡೆ..??

ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಆದೇಶದಂತೆ ವಾಹನ ಸವಾರರ ಅನುಕೂಲಕ್ಕೆ ನೆಲಮಂಗಲ ಉಪವಿಭಾಗದ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಡಿಎಲ್ ಅಭಿಯಾನ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನೂ 60 ವರ್ಷ ಮೇಲ್ಪಟ್ಟವರಿಗೆ ಡಿಎಲ್ ಪಡೆಯಲು ಮೆಡಿಕಲ್ ಸರ್ಟಿಫಿಕೇಟ್ ಅಗತ್ಯವಾಗಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಸರ್ಕಾರಿ ವೈದ್ಯ ಪೊಲೀಸ್ ಠಾಣೆ ಪಕ್ಕದಲ್ಲೇ ಹಗಲು ದರೋಡೆಗೆ ಇಳಿದಿದ್ದಾನೆ ಎಂದು ಆರೋಪಿಸಲಾಗಿದೆ.

ಡಿಎಲ್ ಅಭಿಯಾನದಲ್ಲಿ ಸರ್ಕಾರಿ ವೈದ್ಯನ ಹಗಲು ದರೋಡೆ..??

ದೊಡ್ಡಬಳ್ಳಾಪುರ ತಾಲ್ಲೂಕಿನ ಸರ್ಕಾರಿ ವೈದ್ಯ ಡಾ. ಅಬ್ದುಲ್ ರಹಮಾನ್ ಶರೀಫ್ ಮತ್ತವನ ಸಹಾಯಕ ನೂರಾರು ಹಿರಿಯ ನಾಗರೀಕರಿಗೆ ಮೆಡಿಕಲ್ ಸರ್ಟಿಫಿಕೇಟ್ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಪಟ್ಟಣದ ತಾಲ್ಲೂಕು ಕಛೇರಿ ಎದುರು ಮೆಡಿಕಲ್ ಸರ್ಟಿಫಿಕೇಟ್ ಮಾರಾಟ ಮಾಡುತ್ತಿದ್ದು, ತಲೆಗೆ 100, 200 ರೂಪಾಯಿ ಪಡೆದು ಸ್ಥಳದಲ್ಲಿಯೇ ಮೆಡಿಕಲ್ ಸರ್ಟಿಫಿಕೇಟ್ ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಡಾ. ಅಬ್ದುಲ್ ರಹಮಾನ್ ಶರೀಫ್, ನಾನು ಒಬ್ಬ ವೈದ್ಯಾಧಿಕಾರಿ. ನಾನು ಸಾರ್ವಜನಿಕರಿಗೆ ಸಹಾಯವಾಗಲೆಂದು ಉಚಿತವಾಗಿ ಮೆಡಿಕಲ್​ ಸೆರ್ಟಿಫಿಕೇಟ್​ ಮಾಡಿಕೊಡುತ್ತಿದ್ದೇನೆ. ಒಂದು ವೇಳೆ ಜನರೇ ಪ್ರೀತಿಯಿಂದ ಹಣ ಕೊಟ್ಟರೆ ತೆಗೆದುಕೊಳ್ಳುತ್ತಿದ್ದೇನೆ ಅಷ್ಟೆ. ಈ ರೀತಿ ಮೆಡಿಕಲ್ ಸರ್ಟಿಫಿಕೇಟ್ ನೀಡಲು ಭಾರತ ಸರ್ಕಾರವೇ ಹಣ ನೀಡಿದೆ ಎಂದರು.

ಅಷ್ಟೇಅಲ್ಲದೇ, ಹಣ ಪಡೆಯುವ ದೃಶ್ಯ ಚಿತ್ರೀಕರಿಸುತ್ತಿದ್ದ ಸ್ಥಳೀಯ ಖಾಸಗಿ ಮಾಧ್ಯಮ ಪ್ರತಿನಿಧಿಯ ಮೊಬೈಲ್ ಕಸಿದು ಸಾಕ್ಷಿ ನಾಶ ಮಾಡಲು ಯತ್ನ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ವೈದ್ಯ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.

ಹಣ ಪಡೆಯುವ ದೃಶ್ಯ ಸಮೇತ ಸಿಕ್ಕಿಬಿದ್ದಿದ್ದರೂ ಸಾರ್ವಜನಿಕರೂ ಕೂಡ ತಾವು ಹಣವೇ ನೀಡಿಲ್ಲ ಉಚಿತವಾಗಿ ಸೆರ್ಟಿಫಿಕೇಟ್​ ಕೊಡಲಾಗುತ್ತಿದೆ ಎಂದು ಹೇಳಿ ಇಂತಹವರಿಗೆ ಸಹಕರಿಸುತ್ತಿರುವುದು ವಿಪರ್ಯಾಸವೇ ಸರಿ.

ABOUT THE AUTHOR

...view details