ಆನೇಕಲ್:ಶೌಚಕ್ಕೆಂದು ಬಸ್ ಚಾಲಕನಿಗೆ ತಿಳಿಸಿ ಹೊರಟ ಕಂಡಕ್ಟರ್ ಎಷ್ಟೊತ್ತಾದರೂ ಬಾರದೇ ಇದ್ದದ್ದನ್ನು ಕಂಡು ಬಂದು ವಿಚಾರಿಸಿದಾಗ ಶೌಚಾಲಯದಲ್ಲೇ ಸಾವನ್ನಪ್ಪಿರುವುದು ಕಂಡುಬಂದಿದೆ.
ಸಾರ್ವಜನಿಕ ಶೌಚಾಲಯದಲ್ಲೇ ಸಾವನ್ನಪ್ಪಿದ ಸರ್ಕಾರಿ ಬಸ್ ಕಂಡಕ್ಟರ್ - undefined
ಶೌಚಕ್ಕೆಂದು ಸಾರ್ವಜನಿಕ ಶೌಚಾಲಯಕ್ಕೆ ಹೋದ ಬಿಎಂಟಿಸಿ ನೌಕರನೊಬ್ಬ ಶೌಚಾಲಯದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಚಂದಾಪುರ ವೃತ್ತದಲ್ಲಿ ನಡೆದಿದೆ.
ಶೌಚಾಲಯದಲ್ಲೇ ಸಾವನ್ನಪ್ಪಿರುವ ಬಿಎಂಟಿಸಿ ನೌಕರ
ಶಿವಮೊಗ್ಗ ಮೂಲದ 34 ವರ್ಷದ ಮಧುಕರ್ ಸಾವನ್ನಪ್ಪಿರುವ ಸರ್ಕಾರಿ ನೌಕರ. ಆನೇಕಲ್-ಚಂದಾಪುರ ರಸ್ತೆಯ ಇಗ್ಗಲೂರಿನಲ್ಲಿ ವಾಸವಿದ್ದ ಮಧುಕರ್, ಅತ್ತಿಬೆಲೆ-ಬನಶಂಕರಿ ಮಾರ್ಗವಾಗಿ ಚಲಿಸುವ ಸೂರ್ಯಸಿಟಿ ಬಿಎಂಟಿಸಿ ಬಸ್ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸೂರ್ಯನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.