ಹೊಸಕೋಟೆ:ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು ಮಹಿಳೆಯ ಸರ ಕಳುವಿಗೆ ಯತ್ನಿಸಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಕಮ್ಮವಾರಿಪೇಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಗೌರಮ್ಮ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯಲ್ಲಿದ್ದಾಗ ಮುಸುಕು ಧರಿಸಿ ಬಂದ ಕಳ್ಳನೊಬ್ಬ ಸಿಗರೇಟ್ ಕೇಳಿದ್ದಾನೆ. ಇನ್ನು ಮಹಿಳೆ ಸಿಗರೇಟ್ ನೀಡಿ ಕೊಟ್ಟ ಹಣಕ್ಕೆ ಚಿಲ್ಲರೆಯನ್ನ ವಾಪಸ್ ಕೊಟ್ಟಿದ್ದಾಳೆ. ಈ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕುತ್ತಿದ್ದಂತೆ ಗೌರಮ್ಮ ಜೋರಾಗಿ ಕಳ್ಳ ಕಳ್ಳ ಅಂತಾ ಕೂಗಿಕೊಂಡಿದ್ದಾರೆ. ಇದನ್ನ ನೋಡಿದ ಏರಿಯಾದ ಚಂದ್ರು ಎಂಬಾತ ಮಹಿಳೆಯ ನೆರವಿಗೆ ಬಂದಿದ್ದು, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಬಂದಾಗ ಚಂದ್ರುವಿನ ಕೈ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.