ದೊಡ್ಡಬಳ್ಳಾಪುರ : ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದು, ನಾಳೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಇದಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಮಹತ್ವಕ್ಕಿಂತ ಕಂದಾಯ ಸಚಿವರಿಗೆ ಸ್ವಾಗತಕೋರುವ ಫ್ಲೆಕ್ಸ್ಗಳೇ ರಸ್ತೆಯುದ್ದಕ್ಕೂ ರಾರಾಜಿಸುತ್ತಿವೆ.
ನಡೆ ಹಳ್ಳಿ ಕಡೆ ಕಾರ್ಯಕ್ರಮ: ಹೆಬ್ಬಾಳದಿಂದ ಹೊಸಹಳ್ಳಿಯವರೆಗೂ ಫ್ಲೆಕ್ಸ್ ಅಬ್ಬರ - lot of flex and banners
ಕಂದಾಯ ಸಚಿವ ಆರ್. ಅಶೋಕ್ ಅವರ ಗಮನ ಸೆಳೆಯುವ ಕಾರಣಕ್ಕೆ ಹೆಬ್ಬಾಳದಿಂದ ಹೊಸಹಳ್ಳಿ ಗ್ರಾಮದವರೆಗೂ ಸುಮಾರು 50 ಕಿ.ಮೀ ಉದ್ದಕ್ಕೂ ರಸ್ತೆ ಬದಿಯಲ್ಲಿ ಸ್ವಾಗತಕೋರುವ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಕಾರ್ಯಕ್ರಮದ ಮಹತ್ವಕ್ಕಿಂತ ಸ್ವಾಗತ ಕೋರುವ ಫ್ಲೆಕ್ಸ್ಗಳ ಅಬ್ಬರ ಜೋರಾಗಿದೆ.
ಗ್ರಾಮಸ್ಥರ ಸಮಸ್ಯೆಗಳಿಗೆ ಗ್ರಾಮದಲ್ಲಿಯೇ ಪರಿಹಾರ ನೀಡುವ ವಿನೂತನ ಕಾರ್ಯಕ್ರಮ ಇದಾಗಿದ್ದು, ಪ್ರತಿ ತಿಂಗಳ ಮೂರನೇ ಶನಿವಾರ ಪ್ರತೀ ತಾಲೂಕಿನ ಒಂದು ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಫೆಬ್ರವರಿ 20ರಂದು ಕಂದಾಯ ಸಚಿವ ಆರ್. ಅಶೋಕ್ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಸಚಿವ ಆರ್.ಅಶೋಕ್ ಅವರ ಗಮನ ಸೆಳೆಯುವ ಕಾರಣಕ್ಕೆ ಹೆಬ್ಬಾಳದಿಂದ ಹೊಸಹಳ್ಳಿ ಗ್ರಾಮದವರೆಗೂ ಸುಮಾರು 50 ಕಿಮೀ ಉದ್ದಕ್ಕೂ ರಸ್ತೆ ಬದಿಯಲ್ಲಿ ಸ್ವಾಗತಕೋರುವ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಕಾರ್ಯಕ್ರಮದ ಮಹತ್ವಕ್ಕಿಂತ ಸ್ವಾಗತ ಕೋರುವ ಫ್ಲೆಕ್ಸ್ಗಳ ಅಬ್ಬರ ಜೋರಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಒಂದು ರೀತಿಯಲ್ಲಿ ಪ್ರಚಾರದ ಕಡೆ ಆಗಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.