ದೊಡ್ಡಬಳ್ಳಾಪುರ: ದಾಬಸ್ ಪೇಟೆ- ಹೊಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿದೆ. ನಗರದಲ್ಲಿನ ವಾಹನದಟ್ಟನೆ ತಡೆಯುವ ಕಾರಣಕ್ಕೆ ನಗರ ಹೊರಗೆ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಿಂದೂಪುರ-ಯಲಹಂಕ ರಸ್ತೆಯ ಅಪೆರಲ್ ಪಾರ್ಕ್ ಮೂಲಕ ಹೊರವರ್ತುಲ ರಸ್ತೆ ಹಾದು ಹೋಗುತ್ತಿದೆ.
ಇದೇ ಜಾಗದಲ್ಲಿ ದೊಡ್ಡಬಳ್ಳಾಪುರ ನಗರದ ಶಿವಶಂಕರ್ರವರ 40 × 90 ನಿವೇಶನ ಇದೆ. ಸಂಪೂರ್ಣ ನಿವೇಶನ ಹೆದ್ದಾರಿ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಳಗಾಗಿದೆ. ಆದರೆ ಇಲ್ಲಿಯವರೆಗೂ ಅವರಿಗೆ ಯಾವ ಪರಿಹಾರ ಸಿಕ್ಕಿಲ್ಲ ಎನ್ನುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಶಿವಶಂಕರ್ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಪ್ರತಿ ಚದರ ಆಡಿ ಜಾಗಕ್ಕೆ 400 ರೂಪಾಯಿ ಪರಿಹಾರ ಕೊಡುವುದಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಜಾಗ ಪ್ರತಿ ಚದರಡಿಗೆ 8000 ಬೆಲೆ ಬಾಳುತ್ತದೆ.
ಒಟ್ಟು 2 ಕೋಟಿ ಮೌಲ್ಯದ ಜಾಗಕ್ಕೆ 12 ಲಕ್ಷ ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಬೇಸತ್ತ ಶಿವಶಂಕರ್, ಸರ್ಕಾರ ಕೊಡುವ 12 ಲಕ್ಷ ಪರಿಹಾರ ಬೇಡ, ನಮ್ಮ ಕುಟುಂಬದವರು ಇದೇ ಜಾಗದಲ್ಲಿ ಜೀವಂತ ಸಮಾಧಿಯಾಗುತ್ತೇವೆ. ಸರ್ಕಾರ ನಮ್ಮ ಸಮಾಧಿಯ ಮೇಲೆ ಹೆದ್ದಾರಿ ಕಾಮಗಾರಿ ಮಾಡಲಿ ಎಂದು ತಮ್ಮ ಅಸಹಾಯಕತೆ ತೊಡಿಕೊಂಡರು.
ಇದನ್ನೂ ಓದಿ:ಕೇಂದ್ರ, ರಾಜ್ಯದ ಯೋಜನೆಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು: ಬಿ.ಸಿ.ಪಾಟೀಲ್