ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಅತಿಯಾಗಿ ಮೊಬೈಲ್ ಬಳಸುತ್ತಾಳೆಂದು ತಮ್ಮ ತನ್ನ ಮೊಬೈಲ್ಗೆ ಪಾಸ್ವರ್ಡ್ ಇಟ್ಟಿದ್ದಕ್ಕೆ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ ನಡೆದಿದೆ.
ಪಿಯುಸಿ ಓದುತ್ತಿದ್ದ ರುಚಿತಾ (19) ಎಂಬುವರು ನೇಣಿಗೆ ಶರಣಾದವರು. ರುಚಿತಾ ಮನೆಯಲ್ಲಿ ಅತಿ ಹೆಚ್ಚು ಮೊಬೈಲ್ನಲ್ಲಿ ಮಾತನಾಡುತ್ತಿದ್ದರಂತೆ. ಮೊಬೈಲ್ ಬಳಕೆಯಿಂದ ದೂರ ಮಾಡುವ ಉದ್ದೇಶದಿಂದ ಅವರ ಸಹೋದರ ಪಾಸ್ವರ್ಡ್ ಸೆಟ್ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದೆ.