ಕರ್ನಾಟಕ

karnataka

ETV Bharat / state

ಹೊಟ್ಟೆ ನೋವು ತಾಳಲಾರದೆ ಕೀಟನಾಶಕ ಸೇವಿಸಿ ಯುವತಿ ಆತ್ಮಹತ್ಯೆ - undefined

ಅನಂತಪುರಂ ಜಿಲ್ಲೆ, ಕದಿರಿ ತಾಲೂಕು, ಮೂಲಪಲ್ಲಿ ಗ್ರಾಮದ ಚಲಪತಿ ಎಂಬುವವರ ಪುತ್ರಿ ಅಮ್ಮುಲು ಮೃತ ಯುವತಿ.

ಕೀಟನಾಶಕ ಸೇವಿಸಿ ಯುವತಿ ಆತ್ಮಹತ್ಯೆ

By

Published : Jul 14, 2019, 1:25 AM IST

ದೊಡ್ಡಬಳ್ಳಾಪುರ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿ ನೋವು ತಾಳಲಾರದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಾಡುಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನಂತಪುರಂ ಜಿಲ್ಲೆ, ಕದಿರಿ ತಾಲೂಕು, ಮೂಲಪಲ್ಲಿ ಗ್ರಾಮದ ಚಲಪತಿ ಎಂಬುವವರ ಪುತ್ರಿ ಅಮ್ಮುಲು ಮೃತ ಯುವತಿ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಈಕೆಗೆ ಹಲವು ಕಡೆ ಚಿಕಿತ್ಸೆ ಕೋಡಲಾಗಿತ್ತು. ಆದರೆ, ನೋವು ಕಡಿಮೆಯಾಗದಿದ್ದರಿಂದ ಕೀಟನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ತೀವ್ರ ಅಸ್ವಸ್ಥಳಾದ ಆಕೆಯನ್ನ ದೊಡ್ಡಬಳ್ಳಾಪುರದ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೆ ಸಾವನ್ನಪ್ಪಿದ್ದಾಳೆ. ಈ ಬಗ್ಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details