ಕರ್ನಾಟಕ

karnataka

ETV Bharat / state

ವಾರಾಂತ್ಯದ ಕರ್ಪ್ಯೂ: ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ರದ್ದು

ನಾಗರಾಧನೆಯ ಕ್ಷೇತ್ರ ಘಾಟಿ ಸುಬ್ರಮಣ್ಯದ ಬ್ರಹ್ಮರಥೋತ್ಸವವನ್ನು ಸರ್ಕಾರದ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ

ghati-subramanya-swamy-brahma-rathotsava-cancelled
ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ರದ್ದು

By

Published : Jan 8, 2022, 10:46 AM IST

ದೊಡ್ಡಬಳ್ಳಾಪುರ :ಪ್ರಮುಖ ನಾಗರಾಧನೆಯ ಕ್ಷೇತ್ರವಾದ ಘಾಟಿ ಸುಬ್ರಮಣ್ಯದಲ್ಲಿ ಇಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವವನ್ನು ಸರ್ಕಾರದ ಆದೇಶದ ಮೇರೆಗೆ ರದ್ದು ಮಾಡಲಾಗಿದೆ.

ಕೋವಿಡ್-19 ಸೊಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾನ್ಯ ದಿನಗಳಲ್ಲಿ ರಾತ್ರಿ 10ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರಿಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹೀಗಾಗಿ ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವವನ್ನು ರದ್ದು ಮಾಡಲಾಗಿದ್ದು, ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶವನ್ನೂ ನಿಷೇಧಿಸಲಾಗಿದೆ.

ಆದರೆ ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರ ಸಮ್ಮುಖದಲ್ಲಿ ದೇವಾಲಯದ ಪ್ರಾಂಗಣದಲ್ಲಿ ಸಾಂಕೇತಿಕವಾಗಿ ಬ್ರಹ್ಮ ರಥೋತ್ಸವ ಆಚರಣೆ ನಡೆಯಲಿದೆ. ದೇವಾಲಯದ ಪ್ರಾಂಗಣದಲ್ಲಿರುವ ಸಣ್ಣ ರಥದಲ್ಲಿ ಸುಬ್ರಮಣ್ಯಸ್ವಾಮಿಯನ್ನಿಟ್ಟು ರಥೋತ್ಸವ ನಡೆಸಲಾಗುತ್ತಿದೆ.

ಇದನ್ನೂ ಓದಿ:Weekend Curfew: ನಿಷೇಧಾಜ್ಞೆಯಿಂದ ಬಿಕೋ ಎನ್ನುತ್ತಿವೆ ಬೆಂಗಳೂರಿನ ರಸ್ತೆಗಳು.. ಉಲ್ಲಂಘಿಸಿದರೆ ಕಟ್ಟನಿಟ್ಟಿನ ಕ್ರಮ

ABOUT THE AUTHOR

...view details