ದೊಡ್ಡಬಳ್ಳಾಪುರ: ತೋಟದ ಕೆಲಸಕ್ಕೆ ಕೂಲಿಯಾಳುಗಳನ್ನ ಕರೆತರಲು ಹೊರಟ್ಟಿದ್ದ ಹೋಮ್ ಗಾರ್ಡ್ಗೆ, ಗಾಂಜಾ ನಶೆಯಲ್ಲಿದ್ದ ಯುವಕರು ಅಪಘಾತ ಎಸಗಿ ಹಲ್ಲೆ ನಡೆಸಿರುವ ಘಟನೆ ಕಲ್ಲುಕೋಟೆ ಗ್ರಾಮದಲ್ಲಿ ನಡೆದಿದೆ.
ಬೈಕ್ನಿಂದ ಡಿಕ್ಕಿ ಹೊಡೆದ ಗ್ಯಾಂಗ್ ಅವರ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಹೋಮ್ಗಾರ್ಡ್ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ರಮೇಶ್ ಎಂಬುವರು ನಿನ್ನೆ ರಾತ್ರಿ ತಮ್ಮ ತೋಟದ ಕೆಲಸಕ್ಕೆ ಕೂಲಿಯಾಳುಗಳನ್ನ ಕರೆತರಲು ತುರುವನಹಳ್ಳಿಯಿಂದ ಕಲ್ಲುಕೋಟೆ ಗ್ರಾಮಕ್ಕೆ ಸ್ನೇಹಿತನ ಜೊತೆಯಲ್ಲಿ ಬೈಕ್ನಲ್ಲಿ ತೆರಳುತ್ತಿದ್ದರು.
ಈ ವೇಳೆ ಕಲ್ಲುಕೋಟೆ ಗ್ರಾಮದ ಬಳಿ ತ್ರಿಬಲ್ ರೈಡಿಂಗ್ನಲ್ಲಿ ಬಂದ ಯುವಕರ ಬೈಕ್ ರಮೇಶ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಮತ್ತು ಯುವಕರ ಗ್ಯಾಂಗ್ ನಡುವೆ ಜಗಳವಾಗಿದೆ.