ಕರ್ನಾಟಕ

karnataka

ETV Bharat / state

3ನೇ ಬಾರಿ ಮುಂದೂಡಲ್ಪಟ್ಟ ಬಿಜೆಪಿ ಜನೋತ್ಸವ: ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣಹೋಮ

ಜುಲೈ 28 ರಂದು ನಡೆಯಬೇಕಿದ್ದ ಬಿಜೆಪಿ ಜನೋತ್ಸವವು ಪ್ರವೀಣ್ ನೆಟ್ಟಾರು ಹತ್ಯೆಯಿಂದ, ಆಗಸ್ಟ್ 28 ರಂದು ಗಣೇಶೋತ್ಸವ ಹಿನ್ನೆಲೆಯಲ್ಲಿ ಮತ್ತು ಮೂರನೇ ಬಾರಿ ಸೆ. 8ರಂದು ನಿಗದಿಯಾಗಿದ್ದ ಕಾರ್ಯಕ್ರಮ ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ಮತ್ತೆ ಮುಂದೂಡಿಕೆಯಾಗಿತ್ತು.

Gana Homa on stage to remove rift
ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣ ಹೋಮ

By

Published : Sep 9, 2022, 1:24 PM IST

Updated : Sep 9, 2022, 2:31 PM IST

ದೊಡ್ಡಬಳ್ಳಾಪುರ:ಬಿಜೆಪಿಯ ಜನೋತ್ಸವ ಕಾರ್ಯಕ್ರಮ ಪದೇ ಪದೇ ಮುಂದೂಡಿಕೆಯಾಗುತ್ತಿದ್ದು, ಇದೀಗ ಸತತ ಮೂರನೇ ಬಾರಿಗೂ ಪೋಸ್ಟ್‌ಪೋನ್ ಆಗಿದೆ. ನಾಳೆಗೆ ಈ ಕಾರ್ಯಕ್ರಮ ಮರು ನಿಗದಿಯಾಗಿದ್ದು, ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯಲೆಂದು ವೇದಿಕೆ ಮೇಲೆ ಗಣ ಮತ್ತು ವಿಷ್ಣು ಹೋಮ ಮಾಡಲಾಯಿತು.

ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ಸರ್ಕಾರದ ಮೂರು ವರ್ಷ ಮತ್ತು ಬಸವರಾಜು ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಜನೋತ್ಸವ ಆಯೋಜಿಸಲಾಗುತ್ತಿದೆ.

ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣ ಹೋಮ

ಜುಲೈ 28 ರಂದು ನಡೆಯಬೇಕಿದ್ದ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಮುಂದೂಡಿಕೆಯಾಗಿತ್ತು. ಆಗಸ್ಟ್ 28 ರಂದು ಗಣೇಶೋತ್ಸವ ಹಿನ್ನೆಲೆ ಮತ್ತೆ ಮುಂದೂಡಲಾಗಿದೆ. ಮೂರನೇ ಬಾರಿ ಸೆಪ್ಟೆಂಬರ್ 8ರಂದು ಆಯೋಜನೆಗೆ ನಿರ್ಧರಿಸಲಾಗಿತ್ತು. ಸಚಿವ ಉಮೇಶ್ ಕತ್ತಿ ನಿಧನದ ಕಾರಣ ಮತ್ತೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಹೀಗೆ ಪದೇ ಪದೇ ಕಾರ್ಯಕ್ರಮ ಮುಂದೂಡಿಕೆಯಾಗುತ್ತಿದ್ದುದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು. ಇದೀಗ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಣ ಹೋಮ ಹಾಗೂ ವಿಷ್ಣು ಹೋಮ ಮಾಡಲಾಗಿದೆ.

ಹತ್ತು ಮಂದಿ ಆಗಮಿಕರ ನೇತೃತ್ವದಲ್ಲಿ ಹೋಮ ಹವನ ಜರುಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ರೇಷ್ಮೆ ಮಾರಾಟ‌ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ರಾಜ್ಯ ಸರ್ಕಾರ ಜನಸ್ಪಂದನ ಬದಲು ಜಲಸ್ಪಂದನ ಮಾಡಲಿ: ಡಿಕೆಶಿ ವ್ಯಂಗ್ಯ

Last Updated : Sep 9, 2022, 2:31 PM IST

ABOUT THE AUTHOR

...view details