ಕರ್ನಾಟಕ

karnataka

ETV Bharat / state

ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ ಬಂದು ಮೂವರು ಯುವಕರು ಜಲಸಮಾಧಿ - dhoddaballapura

ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಇಲ್ಲಿನ ಘಾಟಿ ಸುಬ್ರಮಣ್ಯ ದೇವಾಲಯದ ಬಳಿಗೆ ಬಂದಿದ್ದ 8 ಜನ ಸ್ನೇಹಿತರಲ್ಲಿ ಮೂವರು ನೀರುಪಾಲಾಗಿದ್ದಾರೆ. ಓರ್ವ ಯುವಕ ಈಜಲು ತೆರಳಿದ್ದಾಗ ಮುಳುಗುವುದನ್ನು ಗಮನಿಸಿ ಅವನ ಕಾಪಾಡಲು ಇನ್ನಿಬ್ಬರು ನೀರಿಗೆ ಇಳಿದಿದ್ದಾರೆ. ಬಳಿಕ ಮೇಲೆ ಬರಲಾಗದೇ ಮೂವರು ಜಲ ಸಮಾಧಿಯಾಗಿದ್ದಾರೆ.

Friends who came to celebrate the birthday party.. drowned in River
ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಬಂದ ಯುವಕರು ಈಜಲು ಹೋಗಿ ನೀರುಪಾಲು

By

Published : May 25, 2020, 7:28 PM IST

ದೊಡ್ಡಬಳ್ಳಾಪುರ (ಬೆಂ.ಗ್ರಾ):ಸ್ನೇಹಿತನ ಬರ್ತಡೇ ಆಚರಿಸಲು 8 ಜನ ಸ್ನೇಹಿತರು 4 ಬೈಕ್​​ನಲ್ಲಿ ಬಂದವರು, ಕೆರೆಯಲ್ಲಿ ಈಜಲು ಹೋದಾಗ ಮೂವರು ಯುವಕರು ನೀರು ಪಾಲಾಗಿರುವ ದುರ್ಘಟನೆ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಸಂಭವಿಸಿದೆ.

ಬೆಂಗಳೂರಿನ ರಾಮಮೂರ್ತಿ ನಗರದ 4 ಜನ ಯುವಕರು ಹಾಗೂ ನಾಲ್ವರು ಯುವತಿಯರು ಜೊತೆಯಾಗಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದಾರೆ.

ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಬಂದ ಯುವಕರು ಈಜಲು ಹೋಗಿ ಸಲಸಮಾಧಿ

ಅನಂತರ ಘಾಟಿ ಸನಿಹದ ತಿಪ್ಪಗಾನಹಳ್ಳಿಯಲ್ಲಿ ಈಜಲೆಂದು ಓರ್ವ ಯುವಕ ಕೆರೆಗೆ ಇಳಿದಿದ್ದಾನೆ. ಆತ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ಸ್ನೇಹಿತರಿಬ್ಬರು ಗೆಳೆಯನನ್ನು ರಕ್ಷಣೆ ಮಾಡಲು ಕೆರೆಗೆ ಹಾರಿದ್ದಾರೆ. ಮುಳುಗುತ್ತಿದ್ದ ಯುವಕನ ಜೊತೆ ಇಬ್ಬರು ಸ್ನೇಹಿತರು ನೀರುಪಾಲಾಗಿದ್ದಾರೆ. ಚಂದ್ರು (20), ರಾಜು (19) ಮತ್ತು ನವೀನ್ (20) ಮೃತರು.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ABOUT THE AUTHOR

...view details