ಕರ್ನಾಟಕ

karnataka

ETV Bharat / state

ಮೈಂಡ್ ಟ್ರೀ ಕಂಪನಿ ವತಿಯಿಂದ ಪೊಲೀಸರಿಗೆ ಉಚಿತ ಕೊರೊನಾ ಟೆಸ್ಟ್​.. - ಎಸ್ಪಿ ರವಿ.ಡಿ ಚೆನ್ನಣವರ್​​

1 ತಿಂಗಳ ಕಾಲ ಜಿಲ್ಲೆಯ ವಿವಿಧ ಠಾಣೆಗಳ ಸುಮಾರು 1300 ಸಿಬ್ಬಂದಿಯ ಸ್ವಾಬ್ ಟೆಸ್ಟ್ ನಡೆಯಲಿದೆ. ದಿನಕ್ಕೆ 50 ಮಂದಿಯಂತೆ ಪೊಲೀಸ್ ಸಿಬ್ಬಂದಿಗೆ ಟೆಸ್ಟ್ ನಡೆಯಲಿದೆ.

ಪೊಲೀಸರಿಗೆ ಉಚಿತ ಸ್ವಾಬ್​ ಟೆಸ್ಟ್​
ಪೊಲೀಸರಿಗೆ ಉಚಿತ ಸ್ವಾಬ್​ ಟೆಸ್ಟ್​

By

Published : Jun 3, 2020, 3:35 PM IST

ಬೆಂಗಳೂರು :ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ‌ಬೆಂಗಳೂರು ಗ್ರಾಮಾಂತರದ ಎಲ್ಲಾ ಪೊಲೀಸರಿಗೆ ಮೈಂಡ್ ಟ್ರೀ ಕಂಪನಿ ಸಹಭಾಗಿತ್ವದಲ್ಲಿ ಉಚಿತವಾಗಿ ಕೋವಿಡ್ -19 ಟೆಸ್ಟ್ ನಡೆಸಲಾಗ್ತಿದೆ. ಇದಕ್ಕೆ ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಹಾಗೂ ಎಸ್ಪಿ ರವಿ ಡಿ ಚೆನ್ನಣ್ಣವರ್​ ಸಾಥ್ ನೀಡಿದ್ದಾರೆ.

ಪೊಲೀಸರಿಗೆ ಉಚಿತ ಸ್ವಾಬ್​ ಟೆಸ್ಟ್​..

1 ತಿಂಗಳ ಕಾಲ ಜಿಲ್ಲೆಯ ವಿವಿಧ ಠಾಣೆಗಳ ಸುಮಾರು 1300 ಸಿಬ್ಬಂದಿಯ ಸ್ವಾಬ್ ಟೆಸ್ಟ್ ನಡೆಯಲಿದೆ. ದಿನಕ್ಕೆ 50 ಮಂದಿಯಂತೆ ನೆಲಮಂಗಲ, ದೊಡ್ಡಬಳ್ಳಾಪುರ, ಆನೇಕಲ್, ಹೊಸಕೋಟೆ ಉಪವಿಭಾಗದ ಪೊಲೀಸ್ ಸಿಬ್ಬಂದಿಗೆ ಟೆಸ್ಟ್ ನಡೆಯಲಿದೆ. ಇದರ ಜೊತೆಗೆ ಜಿಲ್ಲಾ ಸಶಸ್ತ್ರ ಪಡೆ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗೂ ಸ್ವಾಬ್ ಟೆಸ್ಟ್ ನಡೆಸಲಾಗುತ್ತದೆ.

ಕೊರೊನಾ ಅಬ್ಪರ ಶುರುವಾಗುವುದಕ್ಕೂ ಮೊದಲಿನಿಂದಲೇ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಲಸೆ ಕಾರ್ಮಿಕರ ಸಮಸ್ಯೆಗಳಿಗೆ ಅವರ ಜೊತೆಯಲ್ಲಿದ್ದು ಸಹಕರಿಸಿದ್ದಾರೆ. ಹೀಗಾಗಿ ಕೊರೊನಾ ಪೊಲೀಸರಿಗೂ ತಗುಲಿರುವ ಗುಮಾನಿ ಹಿನ್ನೆಲೆಯಲ್ಲಿ ಮೈಂಡ್ ಟ್ರೀ ಲೀಡಿಂಗ್ ಡಿಜಿಟಲ್ ಟ್ರಾನ್ಸ್​ಫಾರ್ಮೇಷನ್ & ಟೆಕ್ನಾಲಜಿ ವತಿಯಿಂದ ಉಚಿತ ಸ್ವಾಬ್ ಟೆಸ್ಟ್‌ ‌ಮಾಡಲಾಗ್ತಿದೆ. ಸದ್ಯ ಇವರ ಕಾರ್ಯಕ್ಕೆ ಐಜಿಪಿ ಹಾಗೂ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details