ಕರ್ನಾಟಕ

karnataka

ETV Bharat / state

ಗ್ಯಾಸ್ ​ಕಟರ್ ಬಳಸಿ ಎಟಿಎಂ ದರೋಡೆ ಯತ್ನ: ಬೆಂಕಿ ತಗುಲಿ ನೋಟುಗಳು ಭಸ್ಮ - ಗ್ಯಾಸ್ ​ಕಟರ್ ಬಳಸಿ ಎಟಿಎಂ ದರೋಡೆ

ATM theft attempt at Nelamangala: ಗ್ಯಾಸ್​ ಕಟರ್ ಮೂಲಕ ದುಷ್ಕರ್ಮಿಗಳು​ ಎಟಿಎಂ ದರೋಡೆಗೆ ಯತ್ನಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

Theft attempt in Axis bank ATM in Nelamangala
ಎಟಿಎಂನಿಂದ ಹಣ ದೋಚಲು ವಿಫಲಯತ್ನ

By ETV Bharat Karnataka Team

Published : Dec 7, 2023, 8:36 PM IST

Updated : Dec 7, 2023, 9:27 PM IST

ನೆಲಮಂಗಲ:ದುಷ್ಕರ್ಮಿಗಳು ಗ್ಯಾಸ್ ಕಟರ್​ನಿಂದ ಎಟಿಎಂ ಯಂತ್ರ ಕತ್ತರಿಸಲು ಯತ್ನಿಸುತ್ತಿದ್ದಾಗ ಬೆಂಕಿ ತಗುಲಿ ನೂರಾರು ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ನೆಲಮಂಗಲದಲ್ಲಿ ಕಳೆದ ಮಧ್ಯರಾತ್ರಿ ನಡೆದಿದೆ. ಮಾಹಿತಿ ತಿಳಿದು ಯಂತ್ರ ಅಳವಡಿಸಲಾಗಿದ್ದ ಕಟ್ಟಡ ಮಾಲೀಕ ಮತ್ತು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.

ನಗರದ ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ರಾತ್ರಿ 1.50ರ ಸುಮಾರಿಗೆ ಇಬ್ಬರು ದುಷ್ಕೃತ್ಯ ಎಸಗಿದ್ದಾರೆ. ಕಳವು ಮಾಡುತ್ತಿರುವ ಮಾಹಿತಿ ಮುಂಬೈನಲ್ಲಿರುವ ಬ್ಯಾಂಕ್ ಸಿಬ್ಬಂದಿಗೆ ತುರ್ತು ಸಂದೇಶದ ಮೂಲಕ ಗೊತ್ತಾಗಿದೆ. ಕೂಡಲೇ ಅವರು ಸ್ಥಳೀಯ ಬ್ಯಾಂಕ್ ಶಾಖಾಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ಯಾಸ್ ಕಟರ್​ನಿಂದ ಎಟಿಎಂ ಯಂತ್ರ ತುಂಡರಿಸುವಾಗ ಹಣವಿದ್ದ ಮೊದಲ ಟ್ರೇಗೆ ಬೆಂಕಿ ತಗುಲಿದೆ. ಅದರಲಿದ್ದ ನೋಟುಗಳು ಬೆಂಕಿಗಾಹುತಿಯಾಗಿವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ತುಮಕೂರು: ಚಿನ್ನ ಖರೀದಿ ನೆಪದಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ- ಸಿಸಿಟಿವಿ ದೃಶ್ಯ

Last Updated : Dec 7, 2023, 9:27 PM IST

ABOUT THE AUTHOR

...view details