ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ತೋಟಗಾರಿಕೆ ಮೇಳ: ಘಮ ಘಮಿಸಿದ ಪುದಿನ ತಳಿಗಳು - national horticultural summit

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ನಾಲ್ಕು ವಿಧದ ಪುದಿನ ತಳಿಗಳು ಗಮನ ಸೆಳೆದವು.

Four different kinds of mint
ನಾಲ್ಕು ವಿವಿಧ ಬಗೆಯ ಪುದಿನ ತಳಿಗಳು

By

Published : Feb 13, 2021, 8:23 AM IST

ಬೆಂಗಳೂರು: ಔಷಧಿ ಸಸ್ಯವಾಗಿ, ಅಡುಗೆಯಲ್ಲಿನ ಪರಿಮಳ ಮತ್ತು ರುಚಿಗೂ ಪುದಿನ ಬಳಕೆಯಾಗುತ್ತೆ. ಈ ಬಾರಿಯ ತೋಟಗಾರಿಕೆ ಮೇಳದಲ್ಲಿ ನಾಲ್ಕು ಬಗೆಯ ಪುದಿನ ತಳಿಗಳನ್ನ ಪ್ರದರ್ಶನಕ್ಕೆ ಇಡಲಾಗಿದ್ದು, ನಾಲ್ಕು ಪುದಿನ ತಳಿಗಳು ಬಣ್ಣ, ರುಚಿ , ವಾಸನೆಯಲ್ಲೂ ವಿಭಿನ್ನವಾಗಿದ್ದವು.

ನಾಲ್ಕು ವಿವಿಧ ಬಗೆಯ ಪುದಿನ ತಳಿಗಳ ಕುರಿತು ಮಾಹಿತಿ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ನಾಲ್ಕು ವಿಧದ ಪುದಿನ ತಳಿಗಳಾದ, ವಿಲಾಯತ್ರಿ ಪುದಿನ (ಪೇಪರ್​​ ಮಿಂಟ್) , ಪುದಿನ ( ಗಾರ್ಡನ್ ಮಿಂಟ್), ಜಪಾನಿ ಪುದಿನ , ಬೆಟ್ಟದ ಪುದಿನ (ಸ್ಪಿಯರ್ ಮಿಂಟ್ ) ಗಮನ ಸೆಳೆದವು.

ಪುದಿನವನ್ನು ಪ್ರಮುಖವಾಗಿ ಔಷಧಿ ಸಸ್ಯವಾಗಿ ಮತ್ತು ಅಡುಗೆಯಲ್ಲೂ ಬಳಸಲಾಗುತ್ತದೆ. ವಿಲಾಯತ್ರಿ ಪುದಿನ ಮೆಂಥಲ್ ಫ್ಲೇವರ್​ ಹೊಂದಿದ್ದು, ಟೂತ್ ಪೇಸ್ಟ್ ಮತ್ತು ಸಾಬುನೂ ತಯಾರಿಕೆಯಲ್ಲಿ ಸುವಾಸನೆಗಾಗಿ ಬಳಸಲಾಗುತ್ತದೆ. ಪುದಿನ (ಗಾರ್ಡನ್ ಪುದಿನ ) ಆಡುಗೆಗೆ ಬಳಸುವ ಪುದಿನವಾಗಿದೆ. ಬೆಟ್ಟದ ಪುದಿನ ಮತ್ತು ಜಪಾನಿ ಪುದಿನ ಸಹ ಸುವಾಸನೆಗೆ ಬಳಸಲಾಗುತ್ತದೆ. ನಾಲ್ಕು ಪುದಿನ ತಳಿಗಳಲ್ಲಿ ಔಷಧಿಯ ಗುಣಗಳಿದ್ದು ಜಿರ್ಣಕ್ರಿಯೆಗೆ ಸಹಾಯ ಮಾಡತ್ತವೆ. ಹಾಗೆಯೇ ದೇಹಕ್ಕೆ ತಂಪುಕಾರಿಯಾಗಿ ಕೆಲಸ ಮಾಡಲಿದೆ.

ಓದಿ : ವರನಟ ಡಾ ರಾಜ್​ ಪುತ್ಥಳಿ ಮಂಟಪ ಧ್ವಂಸ: ಅಭಿಮಾನಿಗಳ ಆಕ್ರೋಶ

ABOUT THE AUTHOR

...view details