ಕರ್ನಾಟಕ

karnataka

ETV Bharat / state

ಸಿಮೆಂಟ್​ ಮಿಕ್ಸರ್​ ಲಾರಿಗೆ ಡಿಕ್ಕಿ ಹೊಡೆದ ಕಾರು: ನಾಲ್ವರ ದುರ್ಮರಣ - ಬಾಗಲೂರು ಬಳಿ ತಡರಾತ್ರಿ ಅಪಘಾತದಲ್ಲಿ ನಾಲ್ವರು ದುರ್ಮರಣ

ಯಲಹಂಕದ ಬಾಗಲೂರು ಬಳಿ ತಡರಾತ್ರಿ ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.

accident
ಬಾಗಲೂರು

By

Published : Jan 31, 2021, 3:46 PM IST

ದೇವನಹಳ್ಳಿ:ಸಿಮೆಂಟ್ ಮಿಕ್ಸರ್ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಯಲಹಂಕದ ಬಾಗಲೂರು ಬಳಿ ತಡರಾತ್ರಿ ನಡೆದಿದೆ.

ಮೃತರನ್ನು ಬಾಗಲೂರು ನಿವಾಸಿಗಳಾದ ಮಧುಸೂಧನ್ (26), ಪಿ.ಶಂಕರ್(26), ಮಿಲನ್​ ರಾಜ್ (19) ಹಾಗೂ ಅನುಷಾ(22) ಎಂದು ಗುರುತಿಸಲಾಗಿದೆ. ಕಣ್ಣೂರಿನಿಂದ ಬೆಳ್ಳಳ್ಳಿ ಕಡೆ ಪ್ರಯಾಣಿಸುತ್ತಿದ್ದ ಇವರ ಪೋಕ್ಸ್ ವೇಗನ್ ಕಾರು ತಡರಾತ್ರಿ 1.30ರ ಸುಮಾರಿಗೆ ಬಾಗಲೂರು ಬಳಿ ಮುಂದಿನಿಂದ ತೆರಳುತ್ತಿದ್ದ ಸಿಮೆಂಟ್​ ಮಿಕ್ಸರ್​ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಅನುಷಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಇನ್ನು ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.

ಘಟನೆ ಕುರಿತು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details