ಕರ್ನಾಟಕ

karnataka

ETV Bharat / state

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮತ್ತೆ ನಾಲ್ಕು ಕೊರೊನಾ ದೃಢ - ಕೊರೊನಾ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ವರಲ್ಲಿ ಇಂದು ಕೊರೊನಾ ದೃಢಪಟ್ಟಿದ್ದು, ಇಬ್ಬರು ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕ ಹೊಂದಿದ್ದವರಾಗಿದ್ದಾರೆ, ಇನ್ನಿಬ್ಬರು ಇನ್‌ಫ್ಲೂಯೆನ್ಜಾ ಲೈಕ್‌ ಇಲ್​​ನೆಸ್ ‌(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದವರಾಗಿದ್ದಾರೆ

Four Corona firm in Bangalore Rural
ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮತ್ತೆ ನಾಲ್ಕು ಕೊರೊನಾ ದೃಢ

By

Published : Jun 19, 2020, 11:04 PM IST

ಬೆಂಗಳೂರು ಗ್ರಾಮಾಂತರ : ಜಿಲ್ಲೆಯ ನಾಲ್ವರಲ್ಲಿ ಇಂದು ಕೊರೊನಾ ದೃಢಪಟ್ಟಿದ್ದು, ಇಬ್ಬರು ಸೋಂಕಿತ ವ್ಯಕ್ತಿಗಳ ಪ್ರಥಮ ಸಂಪರ್ಕ ಹೊಂದಿದ್ದವರಾಗಿದ್ದಾರೆ, ಇನ್ನಿಬ್ಬರು ಇನ್‌ಫ್ಲೂಯೆನ್ಜಾ ಲೈಕ್‌ ಇಲ್​​ನೆಸ್ ‌(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ನೆಲಮಂಗಲ ತಾಲೂಕಿನ ತಿರುಮಲಾಪುರ ಗ್ರಾಮದ ನಿವಾಸಿಯಾದ 37 ವರ್ಷದ ಮಹಿಳೆ(ಪಿ-8078), 16 ವರ್ಷದ ಬಾಲಕಿ(ಪಿ-8079), ಪಿ-7624 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ, ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಗ್ರಾಮದ 31 ವರ್ಷದ ಪುರುಷ(ಪಿ-8080) ಮತ್ತು ಆಲನಹಳ್ಳಿ ಗ್ರಾಮದ 59 ವರ್ಷದ(ಪಿ-3464) ಪುರುಷನು ಇನ್‌ಫ್ಲೂಯೆನ್ಜಾ ಲೈಕ್‌ ಇಲ್​ನೆಸ್ ‌(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ABOUT THE AUTHOR

...view details