ಕರ್ನಾಟಕ

karnataka

ETV Bharat / state

ಗೋಶಾಲೆ ತೆರೆದು ಸರ್ಕಾರವೇ ರೈತರಿಂದ ಜಾನುವಾರು ಖರೀದಿಸಲಿ: ಕೃಷ್ಣಬೈರೇಗೌಡ - ಗೋಹತ್ಯೆ ನಿಷೇಧ ಕಾಯ್ದೆ 2020

ಇವತ್ತು ರೈತರ ಸ್ಥಿತಿ ಐಸಿಯುನಲ್ಲಿರುವ ರೋಗಿಯಂತಿದೆ. ಈಗಲೋ ಆಗಲೋ ಪ್ರಾಣ ಪಕ್ಷಿ ಹಾರುವಂತಿದೆ. ಇಂತಹ ಸಮಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ರೈತರ ಜೀವನವನ್ನೇ ಬರಡು ಮಾಡಲಿದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಸರ್ಕಾರದ ವಿರುದ್ಧ ಹರಿಹಾಯ್ದರು.

Former minister Krishna Byregowda
ಮಾಜಿ ಸಚಿವ ಕೃಷ್ಣಬೈರೇಗೌಡ

By

Published : Jan 27, 2021, 9:37 PM IST

ದೊಡ್ಡಬಳ್ಳಾಪುರ:ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ರೈತರಿಗೆ ಮಾರಕ. ಕಾಯ್ದೆಯ ಜೊತೆಗೆ ತಾಲೂಕು ಮತ್ತು ಹೋಬಳಿಗಳಲ್ಲಿ ಗೋಶಾಲೆ ತೆರೆದು ರೈತರಿಂದ ಸರ್ಕಾರವೇ ಜಾನುವಾರು ಖರೀದಿ ಮಾಡಿಲಿ. ಅದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಸರ್ಕಾರದ ವಿರುದ್ಧ ಚಾಟಿ ಬೀಸಿದರು.

ಇದನ್ನೂ ಓದಿ...ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದ ಬಮೂಲ್​​​.. ಲೀಟರ್​​ಗೆ 2 ರೂಪಾಯಿ ಏರಿಕೆ..

ತಾಲೂಕಿನ ಮೆಣಸಿ ಕಾಲೋನಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ವಯಸ್ಸಾದ ಹಸುಗಳನ್ನು ಮಾರಾಟ ಮಾಡಬಾರದು ಎಂಬ ಕಾನೂನು ತಂದಿದೆ. ಮನೆಯಲ್ಲಿ ಜನಿಸಿದ ಗಂಡು ಕರು, ಕೋಣದ ಮರಿಗಳನ್ನು ಹಾಗೂ ಹಾಲು ನೀಡದಿರುವ ಹಸುಗಳನ್ನು ಮಾರಾಟ ಮಾಡಬಾರದು ಎಂಬ ಆದೇಶ‌ ಹೊರಡಿಸಿದೆ. ಇದು ರೈತರಿಗೆ ಸಾಕಷ್ಟು ಹೊರೆಯಾಗಲಿದೆ ಎಂದರು.

ಮಾಜಿ ಸಚಿವ ಕೃಷ್ಣಬೈರೇಗೌಡ

ಹಳ್ಳಿಗಳಲ್ಲಿ ಹಸು ಕಟ್ಟಲು ಜಾಗದ ಸಮಸ್ಯೆ, ನಿರ್ವಹಣೆ ವೆಚ್ಚ ಹೆಚ್ಚು. ಮೇವಿನ ಸಮಸ್ಯೆ ಎದುರಾಗಬಹುದು. ಅವರು ಹಾಲಿನಲ್ಲಿ ದುಡಿದ ಹಣಕ್ಕಿಂತ ಹೆಚ್ಚು ಹಣ ವ್ಯಯ ಮಾಡಬೇಕಾಗುತ್ತದೆ. ಹೀಗಾಗಿ ಸರ್ಕಾರವೇ ತಾಲೂಕು ಮತ್ತು ಹೋಬಳಿಗಳಲ್ಲಿ ಗೋಶಾಲೆ ತೆರೆದು ರೈತರಿಂದ ಜಾನುವಾರುಗಳನ್ನು ಖರೀದಿಸಲಿ ಎಂದರು.

ABOUT THE AUTHOR

...view details