ದೊಡ್ಡಬಳ್ಳಾಪುರ: ಅಕ್ರಮ ಗೋ ಸಾಗಣೆ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಗೋ ಸಂಪತ್ತು ಉಳಿಸುವ ಮೂಲಕ ನಾಡಿಗೆ ನಮ್ಮ ಕೊಡುಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ತಾಲೂಕು ಘಾಟಿ ಸುಬ್ರಮಣ್ಯ ಕ್ಷೇತ್ರ ಬಳಿಯ ರಾಷ್ಟ್ರೋತ್ಥಾನ ಸಂಸ್ಥೆಗೆ ಮಾಧವ ಸೃಷ್ಟಿ ಗೋಶಾಲೆಯಲ್ಲಿ ಬೃಂದಾವನ ಕೃಷಿ ಅರಣ್ಯ ಯೋಜನೆಯ ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಇವರ ಜೊತೆ ವಿಜಯೇಂದ್ರ, ಶಾಸಕ ಎಸ್. ಆರ್ ವಿಶ್ವನಾಥ್ ಸಹ ಭಾಗಿಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಗೋ ಪೂಜೆ ಮಾಡುವ ಕಾರ್ಯಕ್ರಮಕ್ಕೆ ಬಿಎಸ್ವೈ ಅವರು ಚಾಲನೆ ನೀಡಿದರು. ನಂತರ ಸಸಿ ನೆಟ್ಟರು. ನಂತರ ಈ ಕುರಿತು ಮಾತನಾಡಿದ ಅವರು, ಘಾಟಿ ಬಳಿಯ ಗೋಶಾಲೆಗೆ ಭೂಮಿ ನೀಡಲು ಸ್ವತಃ ನಾನೇ ಇಲ್ಲಿಗೆ ಬಂದಿದ್ದೆ. 115 ಎಕರೆ ವಿಸ್ತೀರ್ಣದ ಈ ಪ್ರದೇಶದಲ್ಲಿ ರಾಷ್ಟ್ರೋತ್ಥಾನ ಮಾಧವ ಸೃಷ್ಟಿ ಗೋಶಾಲೆ ನಡೆಸುತ್ತಿದೆ. ಇಲ್ಲಿ 650 ಗೋವುಗಳ ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್ನಿಂದ ಮಾದರಿ ಕೆಲಸ: ಅಕ್ರಮ ಗೋ ಸಾಗಣೆ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ದೇಶಿ ತಳಿಗಳ ಹಸುಗಳ ರಕ್ಷಣೆ ಮಾಡಬೇಕಿದೆ. ಇದು ನಮ್ಮ ನಾಡಿಗೆ ನೀಡುವ ಕೊಡುಗೆಯಾಗಿದೆ. ಘಾಟಿ ಸುಬ್ರಮಣ್ಯ ಬಳಿಯ ರಾಷ್ಟ್ರೋತ್ಥಾನ ಪರಿಷತ್ನಿಂದ ಮಾದರಿ ಕೆಲಸ ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶವನ್ನು ಕೃಷಿಗೆ ಅನುಕೂಲಕರ ಭೂಮಿಯಾಗಿ ಪರಿವರ್ತನೆ ಮಾಡಲಾಗಿದೆ. ಕಾಡು ಮಧ್ಯೆಯೇ ಕೃಷಿ ಮಾಡುವುದು ಸವಾಲಿನ ಕೆಲಸವಾಗಿದೆ. ಅರಣ್ಯ ಕೃಷಿ ಮತ್ತು ದೇಶಿ ಹಸುಗಳ ಬಗ್ಗೆ ಮಾಹಿತಿ ನೀಡಲು ಈ ಸ್ಥಳ ವರವಾಗಲಿದೆ ಎಂದರು.
ಓದಿ:ರಾಜ್ಯದಲ್ಲಿಂದು 1,669 ಮಂದಿಗೆ ಕೋವಿಡ್ ದೃಢ: 22 ಸೋಂಕಿತರ ಸಾವು