ಕರ್ನಾಟಕ

karnataka

ETV Bharat / state

ಮಾಜಿ ಸೇನಾಧಿಕಾರಿಗೇ ವಂಚಕನ ಮಾಯಾಜಾಲ: ಎಸಿ ಆಪ್ತನೆಂದು ಹಣ ದೋಚಿ ಪರಾರಿಯಾದ ಖದೀಮ - ದೊಡ್ಡಬಳ್ಳಾಪುರದ ಸಬ್ ರಿಜಿಸ್ಟರ್ ಕಚೇರಿ

ಭೋಪಾಲ್​ನ ಮಾಜಿ ಲೆಫ್ಟಿನೆಂಟ್ ಕರ್ನಲ್ ವಿನಯ್ ಪೊಗಟ್ ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಬಳಿಯ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದರು. ಇದನ್ನು ರಿಜಿಸ್ಟರ್ ಮಾಡಿಸಲು ಬಂದಾಗ ಅಪರಿಚಿತನ ಮೋಸದ ಬಲೆಗೆ ಬಿದ್ದು, 70 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ.

ವಂಚಕನ ಮೋಸದ ಜಾಲಕ್ಕೆ ಬಿದ್ದ ಮಾಜಿ ಸೇನಾಧಿಕಾರಿ

By

Published : Nov 20, 2019, 7:22 PM IST

ದೊಡ್ಡಬಳ್ಳಾಪುರ: ಮಾಜಿ ಲೆಫ್ಟಿನೆಂಟ್ ಕರ್ನಲ್ ಅಪಾರ್ಟ್​ಮೆಂಟ್ ರಿಜಿಸ್ಟರ್ ಮಾಡಿಸಲು ಬಂದಾಗ ಅಪರಿಚಿತನ ಮೋಸದ ಬಲೆಗೆ ಬಿದ್ದು, 70 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ.

ಭೋಪಾಲ್​ನ ಮಾಜಿ ಲೆಫ್ಟಿನೆಂಟ್ ಕರ್ನಲ್ ವಿನಯ್ ಪೊಗಟ್ ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಬಳಿಯ ಅಪಾರ್ಟ್​ಮೆಂಟ್ ಖರೀದಿ ಮಾಡಿದ್ದರು. ಇದಕ್ಕೆ ಸಂಬಂಧ ಪಟ್ಪಂತೆ ರಿಜಿಸ್ಟರ್ ಮಾಡಿಸಲು ದೊಡ್ಡಬಳ್ಳಾಪುರದ ಸಬ್ ರಿಜಿಸ್ಟರ್ ಕಚೇರಿಗೆ ಬಂದಿದ್ದರು.

ವಂಚಕನ ಮೋಸದ ಜಾಲಕ್ಕೆ ಬಿದ್ದ ಮಾಜಿ ಸೇನಾಧಿಕಾರಿ

ಈ ವೇಳೆ, ಅಪರಿಚಿತ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಮಾಜಿ ಸೇನಾಧಿಕಾರಿಯನ್ನ ಪರಿಚಯ ಮಾಡಿಕೊಂಡಿದ್ದಾನೆ. ನಾನು ಎಸಿ ಆಪ್ತನೆಂದು ನಂಬಿಸಿ 70 ಸಾವಿರ ರೂ. ಹಣ ಪಡೆದಿದ್ದಾನೆ. ಹಣ ಪಡೆದ ಅಪರಿಚಿತ ಬಳಿಕ ಪೋನ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಅಪರಿಚಿತನಿಂದ ಮೋಸ ಹೋದ ವಿನಯ್ ಪೊಗಟ್ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಂಚಕನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು. ಮೋಸಗಾರನ ಪತ್ತೆಗಾಗಿ ದೊಡ್ಡಬಳ್ಳಾಪುರ ನಗರ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details