ಕರ್ನಾಟಕ

karnataka

ETV Bharat / state

ಮೊದಲ ಬಾರಿಗೆ ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ - Devanahalli

ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಹಾಗೂ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕ ಹಾಗೂ ಸಾರ್ವಜನಿಕರು ಪಾಲ್ಗೊಂಡು ಮಾವು, ಹಲಸು ರುಚಿ ನೋಡಿ ಖುಷಿ ಪಟ್ಟರು.

ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ

By

Published : May 18, 2019, 5:34 PM IST

ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಹಾಗೂ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕ ಹಾಗೂ ಸಾರ್ವಜನಿಕರು ಪಾಲ್ಗೊಂಡು ಮಾವು, ಹಲಸು ರುಚಿ ನೋಡಿ ಖುಷಿ ಪಟ್ಟರು.

ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ

ಹೌದು, ಇದೇ ಮೊದಲ ಬಾರಿಗೆ ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಮೊದಲ ಬಾರಿಗೆ ಮಾವು, ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ರೈತರು ತಾವು ಬೆಳೆದ ಹಲಸು, ಮಾವು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ. ಬೆಳಗಾರರಿಂದ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಮಾವು ಮತ್ತು ಹಲಸು ಹಣ್ಣಿನ ಮೇಳವನ್ನು ಇಂದಿನಿಂದ ಆರಂಭಿಸಲಾಗಿದೆ.

ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ರಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ಅಂದರೆ 18 ರಿಂದ 21ರವರೆಗೆ ಈ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ವಿವಿಧ ರೀತಿಯ ಮಾವು ಮತ್ತು ಹಲಸುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ರಾಜ್ಯದ ವಿವಿಧೆಡೆ ರೈತರು ಬೆಳೆದಿರುವ ಹಲಸು ಮತ್ತು ಮಾವುಗಳನ್ನು ಗ್ರಾಹಕರಿಗೆ ಕೈಗೆಟಕುವ ರಿಯಾಯ್ತಿ ದರದಲ್ಲಿ ಜಿಲ್ಲಾಡಳಿತದ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಮಾವು ಮತ್ತು ಹಲಸು ಮೇಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡ, ದೇವನಹಳ್ಳಿ ಶಾಸಕ‌ ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ತಾಹಶೀಲ್ದಾರ ಮಂಜುನಾಥ್, ಬೆ. ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಮತ್ತಿತರರು ಚಾಲನೆ ನೀಡಿದರು.

ಬಾದಾಮಿ, ರಸಪುರಿ, ಆಮ್ರಾಪಾಲಿ, ಮಲ್ಲಿಕಾ, ನೀಲಂ, ಮಲಗೋವ, ಬಾಷಾ, ದಶೇರಿ, ಅರ್ಕಾ ಆನ್ಮೋನ್, ಟಾಮಿ ಅಟ್ ಕಿನ್ಸ್, ಲಿಲ್ಲಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಹಾಗೂ ವಿವಿಧ ತಳಿಯ ಹಲಸಿನ ಹಣ್ಣುಗಳು ಇಲ್ಲಿ ದೊರೆಯಲಿವೆ. ಮಾರುಕಟ್ಟೆ ದರಕ್ಕಿಂತ ಶೇ. 10ರ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾವು ಮೇಳದಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಕನಕಪುರ, ದೇವನಹಳ್ಳಿ ಸೇರಿದಂತೆ ಇತರೆ ಜಿಲ್ಲೆ ಮತ್ತು ತಾಲೂಕುಗಳಿಂದ 20ಕ್ಕೂ ಹೆಚ್ಚು ಮಾವು ಮತ್ತು ಹಲಸು ಬೆಳೆಗಾರರು ಭಾಗವಹಿಸಿದ್ದು, ಈ ಮೇಳಕ್ಕಾಗಿ ಜಿಲ್ಲಾಡಳಿತ 20 ಮಳಿಗೆಗಳನ್ನು ನಿರ್ಮಿಸಿ, ರೈತರಿಗೆ ಉಚಿತವಾಗಿ ನೀಡಿದೆ.


ಈ ವೇಳೆ ಮಾತನಾಡಿದ ತೋಟಗಾರಿಕ ಇಲಾಖೆಯ ಉಪ ನಿರ್ದೇಶಕ ರುದ್ರೇಶ್, ಇದೇ ಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ‌ ಮೇಳ ಆಯೋಜನೆ ಮಾಡಲಾಗಿದೆ. ನೇರವಾಗಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ಹಣ್ಣುಗಳು ಸಿಗಲಿವೆ. ಹೆಚ್ಚು ಗ್ರಾಹಕರು ಬಂದು ಹಣ್ಣುಗಳನ್ನು ಖರೀದಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

For All Latest Updates

TAGGED:

Devanahalli

ABOUT THE AUTHOR

...view details