ಕರ್ನಾಟಕ

karnataka

ETV Bharat / state

ಹಣಕ್ಕಾಗಿ ಬಾಲಕನ ಅಪಹರಣ: ಸಿನಿಮೀಯ ರೀತಿಯಲ್ಲಿ ಐವರನ್ನು ಬಂಧಿಸಿದ ಪೊಲೀಸರು

ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನೋರ್ವನನ್ನು ಅಪಹರಿಸಿದ್ದ ಆರೋಪಿಗಳನ್ನು ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಿಡ್ನಾಪ್​ ಆದ ಬಾಲಕನನ್ನು ರಕ್ಷಿಸಿದ ಪೊಲೀಸರು
ಕಿಡ್ನಾಪ್​ ಆದ ಬಾಲಕನನ್ನು ರಕ್ಷಿಸಿದ ಪೊಲೀಸರು

By

Published : Jul 30, 2020, 11:19 AM IST

ನೆಲಮಂಗಲ: ನಾಯಿಮರಿ ಖರೀದಿಸುವ ನೆಪದಲ್ಲಿ ಬಾಲಕನೋರ್ವನನ್ನು ಅಪಹರಿಸಿದ್ದ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ಅಂಧ್ರಹಳ್ಳಿಯ ಮನೋಜ್​(24), ದರ್ಶನ್(20), ಆದರ್ಶ(20), ಲೋಕೇಶ್(20), ಆಕಾಶ್(20) ಬಂಧಿತರು.

ಅಪಹರಣವಾಗಿದ್ದ ಬಾಲಕನನ್ನು ರಕ್ಷಿಸಿದ ಪೊಲೀಸರು

ಅಂಧ್ರಹಳ್ಳಿಯ ನಾಗರಾಜು, ರೇಣುಕಾ ದಂಪತಿ ಪುತ್ರ ನಿತಿನ್‌ನನ್ನು ಸೋಮವಾರ ಸಂಜೆ ನಾಯಿಮರಿ ಖರೀದಿಸುವ ನೆಪದಲ್ಲಿ ಮನೋಜ್​ ಎಂಬಾತ ಕರೆದುಕೊಂಡು ಹೋಗಿದ್ದ. ಅಷ್ಟೇ ಅಲ್ಲದೆ ಮನೋಜ್​ ನಿತಿನ್​ ಕುಟುಂಬಕ್ಕೆ ಪರಿಚಯವಿದ್ದ ಹಿನ್ನೆಲೆಯಲ್ಲಿ ನಿತಿನ್​ ತಂದೆ-ತಾಯಿ ಆತನ ಜೊತೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮನೋಜ್​ ಕರೆ ಮಾಡಿ, ನಿಮ್ಮ ಮಗನನ್ನು ಕಾರಿನಲ್ಲಿ ಬಂದಿದ್ದ ಕೆಲ ದುಷ್ಕರ್ಮಿಗಳು ಬೆಂಗಳೂರಿನ ಬೈಲಕೊನೇನಹಳ್ಳಿ ಸರ್ಕಲ್‌ ಬಳಿ ಅಪಹರಿಸಿದ್ದಾರೆ. 20 ಲಕ್ಷ ಕೊಡದಿದ್ದರೆ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾನೆ. ಆಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆ ಮಾದನಾಯಕನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಕೊನೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾವನೂರ ಬಳಿ ಕಾರನ್ನು ಚೇಸ್‌ ಮಾಡಿ ಬಾಲಕ ನಿತಿನ್‌ನನ್ನು ಪೊಲೀಸರು ರಕ್ಷಿಸಿದ್ದಾರೆ. ಆದರೆ ನಿತಿನ್​ ಪೊಲೀಸರ ಬಳಿ ನಿಕ್ಕಿ ನಾಯಿಮರಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಅಪಹರಣಕಾರರನ್ನು ವಿಚಾರಣೆಗೆ ಒಳಪಡಿಸಿ ನಾಯಿಮರಿ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಬಳಿಕ ನಾಯಿಮರಿ ನಿತಿನ್​ ಕೈ ಸೇರಿದೆ.

ABOUT THE AUTHOR

...view details