ಬೆಂಗಳೂರು: ಜಿಗಣಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಂದ ಹೊರಸೂಸುವ ವಿಷ ಕೆರೆಗೆ ಸೇರಿದ ಪರಿಣಾಮ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಬೆಂಗಳೂರು:ಕೆರೆಗೆ ವಿಷ ತ್ಯಾಜ್ಯ, ಮೀನುಗಳ ಮಾರಣ ಹೋಮ - ಜಿಗಣಿಯ ಕೋನಸಂದ್ರ ಕೆರೆ
ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಂದ ಹೊರಸೂಸುವ ವಿಷ ಕೆರೆಗೆ ಸೇರಿದ ಪರಿಣಾಮ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.
ಜಿಗಣಿಯ ಕೋನಸಂದ್ರ ಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿತ್ತು. ಜಿಗಣಿ ಪ್ರದೇಶದ ಹೈಕಲ್ ಹಾಗೂ ಕುಮಾರ್ ಆರ್ಗ್ಯಾನಿಕ್ ಕಾರ್ಖಾನೆಗಳಿಂದ ಬರುವ ರಸಾಯನಿಕ ನೀರು ಕೆರೆಗೆ ಹರಿಸುತ್ತಿದ್ದರು.ಮಳೆ ನೀರಿನ ಜೊತೆ ರಾಸಾಯನಿಕ ವಿಷ ಮಿಶ್ರಿತ ನೀರನ್ನ ಹರಿಸುತ್ತಿದ್ದು ಹತ್ತಾರು ವರ್ಷದಿಂದ ನೀರು ವಿಷಯುಕ್ತವಾಗಿದೆ.
ಆಗಾಗ ಕೆಮಿಕಲ್ ಕಾರ್ಖಾನೆಗಳ ವಿರುದ್ದ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಕುರಿತು ಕ್ರಮವಹಿಸದಿರುವುದು ಕೋನಸಂದ್ರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.