ದೊಡ್ಡಬಳ್ಳಾಪುರ:ಶನಿವಾರ ರಾತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸಲು ಹೋಗಿದ್ದಾಗ ಆತ ಪೊಲೀಸರ ಮೇಲೆಯೇ ಡ್ರ್ಯಾಗರ್ನಿಂದ ಹಲ್ಲೆ ಮಾಡಲು ಮುಂದಾಗಿದ್ದ. ಈ ವೇಳೆ ಪೊಲೀಸರು ಫೈರಿಂಗ್ ನಡೆಸಿ ಆತನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ಆರೋಪಿ ಬಂಧನಕ್ಕೆ ಹೋದಾಗ ತಿರುಗಿಬಿದ್ದ: ದೊಡ್ಡಬಳ್ಳಾಪುರ ಪೊಲೀಸರಿಂದ ಫೈರಿಂಗ್ - latest bangalore crime news
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಬಂಧಿಸಲು ಹೋದ ದೊಡ್ಡಬಳ್ಳಾಪುರ ಪೊಲೀಸರ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ಮಾಡಲು ಮುಂದಾದವನ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ 307 ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲು ನಿನ್ನೆ ರಾತ್ರಿ 11: 30 ಕ್ಕೆ ಖಚಿತ ಮಾಹಿತಿ ಮೇರೆಗೆ, ಗ್ರಾಮಾಂತರ ಠಾಣೆಯಎಸ್ಐಗಜೇಂದ್ರ ನೇತೃತ್ವದಲ್ಲಿ ನೆಲಮಂಗಲ ರಸ್ತೆಯ ಆಲಹಳ್ಳಿ ಸಮೀಪದ ಮೇಘಾಂಜಲಿ ಕಲ್ಯಾಣ ಮಂಟಪದ ಬಳಿ ಕಾಯುತ್ತಿದ್ದರು. ಆಗ ಕಾರಿನಲ್ಲಿ ಬಂದ ಆರೋಪಿಯನ್ನು ತಡೆಯಲು ಯತ್ನಿಸಿದರೂ ಆತ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದ.
ತಕ್ಷಣವೇ ಬೆನ್ನಟ್ಟಿದ್ದ ಪೊಲೀಸರು ಆಲಹಳ್ಳಿ ಬಳಿ ಕಾರು ತಡೆದು ಬಂಧಿಸಲು ಹೋದಾಗ ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ಅವರ ಮೇಲೆ ಡ್ರ್ಯಾಗರ್ನಿಂದ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ತಕ್ಷಣವೇ ಜಾಗೃತರಾದ ಸಬ್ ಇನ್ಸ್ಪೆಕ್ಟರ್ ಗಜೇಂದ್ರ ಗುಂಡು ಹಾರಿಸಿ ಶರಣಾಗುವಂತೆ ವಾರ್ನಿಂಗ್ ನೀಡಿದ್ದರು. ಆಗಲೂ ಸಹ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.