ದೊಡ್ಡಬಳ್ಳಾಪುರ: ನಗರದ ಹೊರವಲಯದ ರೈಲ್ವೆ ಸ್ಟೇಷನ್ ಸಮೀಪದ ಟಾಫೆ ಟ್ರ್ಯಾಕ್ಟರ್ ಟೈರ್ ಗೋದಾಮಿನಲ್ಲಿ ಇಂದು ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಟೈರ್ಗಳು ಸುಟ್ಟು ಕರಕಲಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ಟಾಫೆ ಟ್ರ್ಯಾಕ್ಟರ್ ಕಂಪನಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮುಂಜಾನೆ ಸುಮಾರು 2 ಗಂಟೆಯ ಸಮಯದಲ್ಲಿ ಟೈರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಸೆಕ್ಯೂರಿಟಿ ಗಾರ್ಡ್ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
2000 ಟ್ರ್ಯಾಕ್ಟರ್ ಬೆಂಕಿಯಿಂದ ಪಾರು:
ಟಾಫೆ ಕಂಪನಿ ಕೃಷಿಯಲ್ಲಿ ಬಳಕೆಯಾಗುವ ಟ್ರ್ಯಾಕ್ಟರ್ ತಯಾರಿಸುವ ಕಂಪನಿಯಾಗಿದ್ದು, ಇಲ್ಲಿ ತಯಾರಾದ ಟ್ರ್ಯಾಕ್ಟರ್ಗಳನ್ನು ದೇಶದ ವಿವಿಧ ಭಾಗಗಳಿಗೆ ರವಾನೆ ಮಾಡಲಾಗುತ್ತದೆ. ಬೆಂಕಿ ಅನಾಹುತ ಸಂಭವಿಸಿದ ವೇಳೆ ಕಂಪನಿಯ ಆವರಣದಲ್ಲಿ 2000 ಟ್ರ್ಯಾಕ್ಟರ್ ಇದ್ದು, ಒಂದು ವೇಳೆ ಟ್ರ್ಯಾಕ್ಟರ್ಗಳಿಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು.
ಸಕಾಲಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಶ್ರಮಿಸಿದ ಅಗ್ನಿಶಾಮಕ ದಳದಿಂದ 2000 ಟ್ರ್ಯಾಕ್ಟರ್ ಬೆಂಕಿಯಿಂದ ಪಾರಾಗಿವೆ.