ದೊಡ್ಡಬಳ್ಳಾಪುರ:ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಬೆಂಕಿಯ ಕೆನ್ನಾಲಿಗೆಗೆ ರಾಗಿ ಸುಟ್ಟು ಬೂದಿಯಾಗಿದೆ. 3 ಲಕ್ಷ ಮೌಲ್ಯದಷ್ಟು ನಷ್ಟ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಸಮೀಪದ ಬೈಯಪ್ಪನಹಳ್ಳಿಯ ನರಸಯ್ಯ ಎಂಬುವವರ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಸುಮಾರು 5ರಿಂದ 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ರಾಗಿ ಫಸಲಿನಿಂದ ಸುಮಾರು 50 ಮೂಟೆಗೂ ಹೆಚ್ಚು ರಾಗಿಯಾಗುವ ನಿರೀಕ್ಷೆ ಇತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ಕಂಗಾಲಾಗಿದ್ದಾನೆ.