ಕರ್ನಾಟಕ

karnataka

ETV Bharat / state

ಹತ್ತಿ ಬಾಕ್ಸ್‌ ತಯಾರಿಕಾ ಘಟಕಕ್ಕೆ ಬೆಂಕಿ... ಕೋಟ್ಯಂತರ ರೂ. ನಷ್ಟ - bommasandra fire

ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ನಷ್ಟವಾಗಿದೆ.

ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ

By

Published : Sep 15, 2019, 4:54 AM IST

ಆನೇಕಲ್‌:ತಾಲೂಕಿನ ಹೆಬ್ಬಗೋಡಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾಟನ್‌ ಬಾಕ್ಸ್‌ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ನೂರ್‌ ಜಾಫರ್‌ ಎಂಬುವವರಿಗೆ ಸೇರಿದ ಕಾರ್ಖಾನೆಯಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಸರಕು, ಸಾಮಗ್ರಿ ಅಗ್ನಿಗೆ ತುತ್ತಾಗಿವೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್​​ನಿಂದ ಹತ್ತಿಗೆ ಬೆಂಕಿ ತಗುಲಿ ಸಿದ್ಧಗೊಂಡಿದ್ದ ಕಾಟನ್‌ ಬಾಕ್ಸ್​​ಗಳಿಗೂ ಆವರಿಸಿಕೊಂಡಿದೆ ಎನ್ನಲಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಸಾಮಗ್ರಿ ಬೆಂಕಿಗೆ ಆಹುತಿಯಾಗಿವೆ.

ಎಲೆಕ್ಟ್ರಾನಿಕ್‌ ಸಿಟಿಯಿಂದ ಹಾಗೂ ಆನೇಕಲ್‌ ಅಗ್ನಿಶಾಮಕದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಈ ಬಗ್ಗೆ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details