ಕರ್ನಾಟಕ

karnataka

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆ ಬೆಂಕಿಗಾಹುತಿ.. ಕುಟುಂಬಕ್ಕೆ ನೆರವಾದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್

By

Published : Feb 25, 2023, 4:45 PM IST

Updated : Feb 25, 2023, 6:00 PM IST

ಶಾರ್ಟ್​ ಸರ್ಕ್ಯೂಟ್​ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ - ಮನೆಯಲ್ಲಿರುವ ಸಾಮಗ್ರಿ ಸೇರಿದಂತೆ ದಾಖಲೆ ಪತ್ರಗಳು ಸುಟ್ಟು ಭಸ್ಮ - ಕುಟುಂಬದ ನೆರವಿಗೆ ಬಂದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್​

film-producer-sarathi-satya-prakash-helped-the-family-after-house-caught-fire
ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆ ಬೆಂಕಿಗಾಹುತಿ, ಕುಟುಂಬಕ್ಕೆ ನೆರವಾದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್

ಕುಟುಂಬಕ್ಕೆ ನೆರವಾದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್

ದೊಡ್ಡಬಳ್ಳಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಇಡೀ ಮನೆ ಬೆಂಕಿಗಾಹುತಿಯಾಗಿ ರೇಷನ್, ಬಟ್ಟೆಗಳು, ಹಣ ಸೇರಿದಂತೆ ದಾಖಲೆ ಪತ್ರಗಳು ಸುಟ್ಟು ಭಸ್ಮವಾಗಿರುವ ಘಟನೆ ದೊಡ್ಡಬಳ್ಳಾಪುರದ ರಾಜೀವ್​ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ತಿನ್ನಲು ಊಟ, ಧರಿಸಲು ಬಟ್ಟೆ ಸಹ ಇಲ್ಲದೆ ಇಡೀ ಕುಟುಂಬ ಬೀದಿಗೆ ಬಂದಿತ್ತು. ಕುಟುಂಬದ ಕರುಣಾಜನಕ ಸ್ಥಿತಿಗೆ ಮರುಗಿದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.

ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ಒಂದನೇ ಹಂತದಲ್ಲಿ ನಿನ್ನೆ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ, ವಿದ್ಯುತ್ ಅವಘಡದಲ್ಲಿ ಅಂಬಿಕಾ ಮತ್ತು ಸೋಮಶೇಖರ್ ದಂಪತಿ ವಾಸವಾಗಿದ್ದ ಮನೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಅದೃಷ್ಟವಶಾತ್ ಗಂಡ, ಹೆಂಡತಿ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ರೇಷನ್, ಬಟ್ಟೆಗಳು, ದಾಖಲೆಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್​ಬುಕ್​ ಸಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ. ಮಕ್ಕಳ ಪಠ್ಯ ಪುಸ್ತಕ, ಸ್ಕೂಲ್ ಯೂನಿಫಾರ್ಮ್ ಸಹ ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.

ಸೋಮಶೇಖರ್ ಕುಟುಂಬ ಸದಸ್ಯರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದಾರೆ, ಮುಂಜಾನೆ 1 ಗಂಟೆ ಸಮಯದಲ್ಲಿ ಮನೆಯ ಬಳಿಯ ವಿದ್ಯುತ್ ಕಂಬದಲ್ಲಿ ವಿದ್ಯುತ್ ಕಿಡಿಯ ಶಬ್ದ ಕೇಳಿ ಬಂದಿದೆ, ಗಂಡ ಹೆಂಡತಿ ಇಬ್ಬರು ಹೊರಗೆ ಬಂದು ನೋಡುವ ಸಮಯದಲ್ಲಿ ಮನೆಯೊಳಗಿದ್ದ ಟಿವಿ ಸ್ಫೋಟಗೊಂಡಿದೆ, ಸ್ಫೋಟದಿಂದ ಉಂಟಾದ ಬೆಂಕಿ ಇಡೀ ಮನೆಯನ್ನು ಅವರಿಸಿದೆ. ಮನೆಯೊಳಗೆ ಮಲಗಿದ್ದ ಮಕ್ಕಳನ್ನ ಹೊರಗೆ ಕರೆ ತಂದಿದ್ದಾರೆ, ಒಂದು ಕ್ಷಣ ತಡವಾಗಿದ್ದರು ಮಕ್ಕಳ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಇಡೀ ಕುಟುಂಬ ಬೆಂಕಿ ಅವಘಡದಲ್ಲಿ ಪಾರಾಗಿದೆ.

ಇದನ್ನೂ ಓದಿ :ದೊಡ್ಡಬೆಳವಂಗಲ ಯುವಕರ ಹತ್ಯೆ: ಕಾಲಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳ ಬಂಧನ

ತಿನ್ನಲು ಆಹಾರ ಇಲ್ಲದೆ, ಧರಿಸಲು ಬಟ್ಟೆ ಇಲ್ಲದೆ ನಿರ್ಗತಿಕರಾಗಿದ್ದ ಕುಟುಂಬದ ಸ್ಥಿತಿಗೆ ಮರುಗಿದ ಚಿತ್ರ ನಿರ್ಮಾಪಕ ಸಾರಥಿ ಸತ್ಯಪ್ರಕಾಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರ ನೋವು ಆಲಿಸಿದರು. ಆರ್ಥಿಕ ಸಹಾಯ ಮಾಡಿದ್ದಲ್ಲದೆ, ಅಗತ್ಯವಾಗಿ ಬೇಕಾದ ದಿನಸಿ ವಸ್ತುಗಳು, ಅಡುಗೆ ತಯಾರಿಸಲು ಪಾತ್ರೆಗಳು ಮತ್ತು ದಾಖಲೆಗಳನ್ನ ಮಾಡಿಸಿಕೊಡುವ ಭರವಸೆಯನ್ನ ನೀಡುವ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿತ್ರ ನಿರ್ಮಾಪಕ ಸಾರಥಿ ಸತ್ಯ ಪ್ರಕಾಶ್​, ರಾಜೀವ್​ ಗಾಂಧಿ ಬಡವಾಣೆಯ ಒಂದನೇ ಹಂತದಲ್ಲಿರುವ ಸೋಮಶೇಖರ್​ ಎಂಬುವವರ ಮನೆಗೆ ನಿನ್ನೆ ಆಕಸ್ಮಿಕವಾಗಿ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ಮನೆಯಲ್ಲಿರುವ ಟಿವಿ, ಪಾತ್ರೆಗಳು, ಮಕ್ಕಳ ಬ್ಯಾಗ್​ ಮತ್ತು ಪುಸ್ತಕಗಳು ಸುಟ್ಟುಹೋಗಿವೆ. ದೇವರ ದಯೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನುವುದು ಸಂತೋಷದ ವಿಷಯ ಎಂದು ಹೇಳಿದರು.

ಇದನ್ನೂ ಓದಿ :ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಗನ ದಾರುಣ ಸಾವು

Last Updated : Feb 25, 2023, 6:00 PM IST

ABOUT THE AUTHOR

...view details