ಬೆಂಗಳೂರು:ಸಿನಿಮಾ ನಟನ ಇನೋವಾ ಕಾರನ್ನು ಮೂವರು ಖದೀಮರು ಕದ್ದು ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಸಿನಿಮಾ ನಟನ ಕಾರ್ ಕದ್ದ ಖದೀಮರು - ಚಿತ್ರನಟ ಚೇತನ್ ಚಂದ್ರಾ
ಬೆಂಗಳೂರಿನ ಸಿನಿಮಾ ನಟನ ಇನೋವಾ ಕಾರನ್ನು ಮೂವರು ಖದೀಮರು ಕದ್ದು ಪರಾರಿಯಾಗಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಚಿತ್ರನಟ ಚೇತನ್ ಚಂದ್ರಾ
ಕನ್ನಡ ಚಿತ್ರನಟ ಚೇತನ್ ಚಂದ್ರಾ ಕಾರು ಕಳೆದುಕೊಂಡವರು. ರಾಜರಾಜೇಶ್ವರಿ ನಗರದ ಬಸವೇಶ್ವರ ಲೇಔಟ್‌ನ ವರ್ಚನ್ ಚೈಲ್ಡ್ ಕೇರ್ ಬಳಿಯ ಮನೆಯಲ್ಲಿ ರಾಮಚಂದ್ರ ಕೆ.ಬಿ. ಎಂಬುವರ ಜೊತೆ ಚೇತನ್ ವಾಸಿಸುತ್ತಿದ್ದ.
ಜುಲೈ 18ರಂದು ರಾತ್ರಿ ಮನೆಯ ಎದುರು ಇನೋವಾ ಕಾರನ್ನು ನಿಲ್ಲಿಸಿದ್ದರು. ಜುಲೈ 19ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮೂವರು ಕಳ್ಳರು ಕಾರನ್ನು ಕದ್ದು ಪರಾರಿಯಾಗಿದ್ದಾರೆ. ಇದು ಒಂದೇ ಅಲ್ಲದೇ ಇದೇ ಠಾಣಾ ವ್ಯಾಪ್ತಿಯಲ್ಲಿ ಇನ್ನೂ ಎರಡು ಕಾರುಗಳು ಕಳ್ಳತನವಾಗಿವೆ.