ಕರ್ನಾಟಕ

karnataka

ETV Bharat / state

ಹೆಚ್ಚುತ್ತಿರುವ ರೌಡಿಗಳ ಅಟ್ಟಹಾಸ: ಪೊಲೀಸ್​ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ - ವರುಣ್​ ಅಲಿಯಾಸ್ ಕೆಂಚ

ಈಗಾಗಲೇ ಈ ಗ್ಯಾಂಗ್ ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವರುಣ್​ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Police personnel Ranganath
ಪೊಲೀಸ್ ಸಿಬ್ಬಂದಿ ರಂಗನಾಥ್

By

Published : Dec 23, 2022, 12:36 PM IST

ಆನೇಕಲ್: ಡ್ಯೂಟಿ ಡ್ರೇಸ್​ನಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಗಂಜಾ ಮತ್ತಿನಲ್ಲಿ ಕಿರಾತಕರ ಗ್ಯಾಂಗ್ ಹಲ್ಲೆ ಮಾಡಿರುವ ಘಟನೆ ಆನೇಕಲ್ ಪಟ್ಟಣದ ದಿನ್ನೂರಿನ ನೀಲಗಿರಿ ತೋಪಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ - ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರು ಗ್ರಾಮದ ಬಳಿ ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಆ್ಯಂಡ್ ಗ್ಯಾಂಗ್ ರಾಘವೇಂದ್ರ ಸರ್ಕಲ್​ ಬಳಿ ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದರು.

ಬೈಕ್ ಸೈಡಿಗೆ ಹಾಕಿ ಎಂದು ಪೊಲೀಸ್ ಸಿಬ್ಬಂದಿ ರಂಗನಾಥ್ ಬುದ್ದಿವಾದ ಹೇಳಿದ್ದರು. ಈ ವೇಳೆ, ಅವಾಚ್ಯ ಶಬ್ದಗಳಿಂದ ಗ್ಯಾಂಗ್​ನವರು‌ ನಿಂದಿಸಿದ್ದರು. ಅಲ್ಲಿಂದ ಎಸ್ಕೇಪ್​ ಆಗಿದ್ದ ಗ್ಯಾಂಗ್​ ದಿನ್ನೂರು ಕಡೆ ಹೋಗಿದ್ದರು. ನಿಂದಿಸಿದ ಕಿರಾತಕರನ್ನು ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಪೊಲೀಸ್ ರಂಗನಾಥ್ ದಿನ್ನೂರಿನ ನೀಲಗಿರಿ ತೋಪಿನ ಕಡೆಗೆ ಹೋಗುತ್ತಿದ್ದಾಗ ವರುಣ್​ ಅಂಡ್ ಗ್ಯಾಂಗ್ ಸುತ್ತುವರಿದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.

ಆರೋಪಿಗಳು

ವರುಣ್​, ಡ್ಯಾನಿ ಹಾಗೂ ಮತ್ತಿಬ್ಬರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ರಂಗನಾಥ್ ಪೋನ್ ಮಾಡಿ ಠಾಣೆಯಲ್ಲಿದ್ದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಂಗನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈಗಾಗಲೇ ಈ ಗ್ಯಾಂಗ್ ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವರುಣ್​ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:ಬಂಟ್ವಾಳ: ಒಂಟಿ ಮಹಿಳೆ ಕಟ್ಟಿಹಾಕಿ ದರೋಡೆ

ABOUT THE AUTHOR

...view details