ಕರ್ನಾಟಕ

karnataka

ETV Bharat / state

RCEP ಒಪ್ಪಂದಕ್ಕೆ ದೊಡ್ಡಬಳ್ಳಾಪುರ ರೈತ ಸಂಘಟನೆ ವಿರೋಧ - Regional Comprehensive Economic Partnership

ಗೋ ಸಂರಕ್ಷಣೆಯ ಹೆಸರಲ್ಲಿ ಬಂದ ಸರ್ಕಾರ ಹಸು ಸಾಕುವ ರೈತರ ಸಂಹಾರ ನಡೆಸಿದೆ. ಗ್ಯಾಟ್ ಒಪ್ಪಂದದಿಂದಾಗಿ ಇಲ್ಲಿಯ ತನಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. RCEP (Regional Comprehensive Economic Partnership) ಒಪ್ಪಂದಕ್ಕೆ ಸಹಿ ಹಾಕಿದರೆ ಅದರ ಪರಿಣಾಮ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತದೆ ಎಂದು ರೈತರು ಆರೋಪಿಸಿದ್ದಾರೆ.

RCEP ಒಪ್ಪಂದಕ್ಕೆ ದೊಡ್ಡಬಳ್ಳಾಪುರ ರೈತ ಸಂಘಟನೆ ವಿರೋಧ

By

Published : Oct 26, 2019, 7:28 PM IST

ದೊಡ್ಡಬಳ್ಳಾಪುರ:ಗೋ - ಸಂರಕ್ಷಣೆಯ ಹೆಸರಲ್ಲಿ ಬಂದ ಕೇಂದ್ರ ಸರ್ಕಾರ ಹಸು ಸಾಕಣೆಯಿಂದ ಉದ್ಯೋಗ ನಡೆಸುತ್ತಿರುವ ರೈತರ ಸಂಹಾರ ನಡೆಸುತ್ತಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಸಹಿ ಹಾಕಿದ್ದಲ್ಲಿ ಮಹಿಳೆಯರ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತದೆ ಎಂದು ರಾಜ್ಯ ರೈತಸಂಘದ ತಾಲೂಕು ಕಾರ್ಯದರ್ಶಿ ಬಚ್ಚಹಳ್ಳಿ ಸತೀಶ್ ಆರೋಪಿಸಿದರು.

RCEP ಒಪ್ಪಂದಕ್ಕೆ ದೊಡ್ಡಬಳ್ಳಾಪುರ ರೈತ ಸಂಘಟನೆ ವಿರೋಧ

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ರೈತಸಂಘ ಮತ್ತು ಹಸಿರು ಸೇನೆ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾಟ್ ಒಪ್ಪಂದದಿಂದಾಗಿ ಇಲ್ಲಿಯ ತನಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು RCEP ಒಪ್ಪಂದಕ್ಕೆ ಸಹಿ ಹಾಕಿದರೆ ಅದರ ಪರಿಣಾಮ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವಂತಾಗುತ್ತದೆ. ಬರಗಾಲ ನೆರೆಯಿಂದ ತತ್ತರಿಸುವಾಗಲೂ ರೈತರು ಹೈನುಗಾರಿಕೆಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದರು. ಈ ಒಪ್ಪಂದದಿಂದ ಹೈನೋದ್ಯಮ ನಾಶವಾಗಲಿದ್ದು ಅದು ಮಹಿಳೆಯರ ಮೇಲೆ ಪರಿಣಾಮ ಬೀರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕದಂತೆ ಒತ್ತಾಯಿಸಿ ಇದೇ ಅಕ್ಟೋಬರ್ 31 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದು ಕೊಳ್ಳುವ ಮೊದಲು ಅದನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕು ಆದರೆ ಈ ಒಪ್ಪಂದಕ್ಕೆ ಯಾವುದೇ ರೀತಿಯ ಚರ್ಚೆ ನಡೆಸದೆ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿರುವುದು ಸಂವಿಧಾನ ಮತ್ತು ಜನವಿರೋಧಿಯಾಗಿದೆ ಎಂದರು.

For All Latest Updates

ABOUT THE AUTHOR

...view details