ಕರ್ನಾಟಕ

karnataka

ETV Bharat / state

ದಯಾಮರಣ ಕೋರಿ ಪತ್ರ ಬರೆದ ಒಂದೇ ಕುಟುಂಬದ 26 ಜನ - Etv Bharat kannada

ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಕಲು ಸಹಿ ಮಾಡಿ ವ್ಯಕ್ತಿಯೊಬ್ಬ ಕಬಳಿಸಿರುವುದಾಗಿ ಆರೋಪಿಸಿ ಒಂದೇ ಕುಟುಂಬದ 26 ಜನರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

KN_BNGRURAL
ದಯಾಮರಣ ಕೋರಿ ಪತ್ರ ಬರೆದ ಕುಟುಂಬ

By

Published : Nov 14, 2022, 8:34 PM IST

ನೆಲಮಂಗಲ: ಪಿತ್ರಾರ್ಜಿತ ಆಸ್ತಿಯನ್ನ ಕಳೆದುಕೊಂಡ ಒಂದೇ ಕುಟುಂಬದ 26 ಜನ ದಯಾಮರಣ ಕೋರಿ ಪತ್ರ ಬರೆದು ತಹಶೀಲ್ದಾರ್​ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ತಡಸೀಘಟ್ಟ ಗ್ರಾಮದ ಗಂಗಹನುಮಕ್ಕ ಕುಟುಂಬದ 26 ಜನರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. 1981 ರಲ್ಲಿ ಗಂಗಹನುಮಕ್ಕನ ತಂದೆ ದಿ. ಭೈರಣ್ಣ ಮಗಳ ಮದುವೆಗೆ ಎಂದು ತಮ್ಮ 3 ಎಕರೆ 22 ಗುಂಟೆ ಜಮೀನನ್ನು ಅದೇ ಗ್ರಾಮದ ರಾಜಗೋಪಾಲಯ್ಯ ಎಂಬ ವ್ಯಕ್ತಿಗೆ 3,500 ರೂಗಳಿಗೆ ವಾಯಿದೆ ಕ್ರಯಕ್ಕೆ ಕೊಟ್ಟಿದ್ದರು.

ಆದರೇ ರಾಜಗೋಪಾಲಯ್ಯ ನಕಲಿ ಸಹಿ ಮತ್ತು ದಾಖಲೆಗಳನ್ನ ಸೃಷ್ಟಿಸಿ ವಾಯಿದೆ ಕ್ರಯಕ್ಕೆ ಕೊಟ್ಟಿದ್ದ ಜಮೀನನ್ನು 2012ರಲ್ಲಿ ಶುದ್ಧ ಕ್ರಯ ಮಾಡಿಕೊಂಡು ತನ್ನ ಹೆಸರಿಗೆ ಮಾಡಿಸಿಕೊಂಡು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ದಯಾಮರಣ ಕೋರಿ ಪತ್ರ ಬರೆದ ಕುಟುಂಬ

ಅಲ್ಲದೇ ಈ ಸಂಬಂಧ ತ್ಯಾಮಗೊಂಡ್ಲು ಠಾಣೆಯಲ್ಲಿ ಶುದ್ಧ ಕ್ರಯ ಪತ್ರದ ಮೇಲಿರುವ ಸಹಿ ನಕಲಿ, ಅದರ ಬಗ್ಗೆ ತನಿಖೆಯಾಗುವಂತೆ ದೂರು ಸಲ್ಲಿಸಿದ್ದು, ಅಲ್ಲೂ ಕೂಡ ರಾಜಗೋಪಾಲಯ್ಯ ದುಡ್ಡು ಕೊಟ್ಟು ನಮಗೆ ನ್ಯಾಯ ಸಿಗದಂತೆ ಮಾಡಿದ್ದಾರೆ.

ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿ ಕುಟುಂಬದ 26 ಜನ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇಲ್ಲೂ ನ್ಯಾಯ ಸಿಗದಿದ್ದಲ್ಲಿ ಆಮರಣಾಂತ ಉಪವಾಸ ಮಾಡುವುದಾಗಿ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:11 ಮಕ್ಕಳಿದ್ದರೂ ತುತ್ತು ಅನ್ನಕ್ಕೆ ವೃದ್ಧೆ ಪರದಾಟ.. ದಯಾಮರಣ ಕೋರಿ ಹಾವೇರಿ ಜಿಲ್ಲಾಧಿಕಾರಿಗೆ ಅರ್ಜಿ

ABOUT THE AUTHOR

...view details