ಕರ್ನಾಟಕ

karnataka

ETV Bharat / state

ಎಟಿಎಂ ದೋಚಲು ವಿಫಲ ಯತ್ನ... ಹತಾಶಯಲ್ಲಿ ಬೈಕ್​ ಸವಾರನ ಬೆದರಿಸಿ ಬೈಕನ್ನೇ ಕದ್ದರು! - ಎಟಿಎಂ ದೋಚಲು ವಿಫಲ ಯತ್ನ

ಎಟಿಎಂ ದೋಚಲು ವಿಫಲ ಯತ್ನ ನಡೆಸಿದ ದರೋಡೆಕೋರರ ತಂಡವೊಂದು ಹಣ ಸಿಗದೆ ಹತಾಶರಾಗಿದ್ದಾರೆ. ಈ ಸಂದರ್ಭದಲ್ಲಿ ಆ ದಾರಿಯಾಗಿ ಬರುತ್ತಿದ್ದ ಬೈಕ್​ ಸವಾರನೊಬ್ಬನನ್ನು ಅಡ್ಡಗಟ್ಟಿ ಆತನ ಬೈಕ್​ ದೋಚಿ ಪರಾರಿಯಾಗಿರುವಂತಹ ಘಟನೆ ನಡೆದಿದೆ.

axis bank ATM
ಎಕ್ಸಿಸ್ ಬ್ಯಾಂಕ್

By

Published : Dec 26, 2019, 6:01 PM IST

ದೇವನಹಳ್ಳಿ: ಎಟಿಎಂನಲ್ಲಿ ಹಣ ದೋಚಲು ದರೋಡೆಕೋರರು ವಿಫಲ ಯತ್ನ ನಡೆಸಿದ್ದು, ಹಣ ಸಿಗದೆ ಹತಾಶರಾಗಿದ್ದಾರೆ. ಈ ಸಂದರ್ಭ ಹೆದ್ದಾರಿಯಲ್ಲಿ ಬರುತ್ತಿದ್ದ ಬೈಕ್ ಸವಾರನನ್ನ ಚಾಕು ತೋರಿಸಿ ಹೆದರಿಸಿ ಬೈಕ್ ಸಮೇತ ಪರಾರಿಯಾದ ಘಟನೆ ನಡೆದಿದೆ.

ದರೋಡೆಕೋರರು ದೋಚಲೆತ್ನಿಸಿದ ಎಟಿಎಂ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಚಿಕ್ಕಜಾಲ ಬಳಿಯ ವಿದ್ಯಾನಗರ ಕ್ರಾಸ್​ನಲ್ಲಿ ಘಟನೆ ನಡೆದಿದ್ದು. ನಾಲ್ವರು ಮುಸುಕುಧಾರಿಗಳು ಎಕ್ಸಿಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್​ ಇಂಡಿಯಾ ಎಟಿಎಂಗಳಲ್ಲಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ ಎಟಿಎಂ ಹಣ ದೋಚಲು ವಿಫಲರಾದ ದರೋಡೆಕೊರರು ಹತಾಶಗೊಂಡಿದ್ದಾರೆ.

ಇನ್ನು ಇದೇ ಸಮಯಕ್ಕೆ ಹೆದ್ದಾರಿಯಲ್ಲಿ ಬೈಕ್​ನಲ್ಲಿ ಬರ್ತಿದ್ದ ವ್ಯಕ್ತಿಗೆ ಚಾಕುವಿನಿಂದ ಬೆದರಿಸಿ ಹಣ ದೋಚಲು ಯತ್ನಿಸಿದ್ದಾರೆ. ದರೋಡೆಕೋರರಿಗೆ ಹೆದರಿದ ಬೈಕ್ ಸವಾರ ಸ್ಥಳದಲ್ಲೆ ಬೈಕ್ ಬಿಟ್ಟು ಓಡಿಹೋಗಿದ್ದಾನೆ. ಆತನಿಂದ ಬೈಕ್ ಎಗರಿಸಿದ ದರೋಡೆಕೋರರು ಪರಾರಿಯಾಗಿದ್ದಾರೆ.

ದರೋಡೆಕೋರರು ಪಲ್ಸರ್ 220 ಮತ್ತು ಕಾರಿನಲ್ಲಿ ಬಂದಿದ್ದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details