ಆನೇಕಲ್: ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಬಳಿ ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಡುಗೆ ಅನಿಲ ಅಕ್ರಮ ದಾಸ್ತಾನು: ಸಿಲಿಂಡರ್ ಸ್ಫೋಟಗೊಂಡು ಇಬ್ಬರ ಸ್ಥಿತಿ ಗಂಭೀರ - ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ
ಎಲೆಕ್ಟ್ರಾನಿಕ್ ಸಿಟಿ ಬಳಿಯ ದೊಡ್ಡತೋಗೂರಿನ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಿಲಿಂಡರ್ಗಳು ಸ್ಫೋಟಗೊಂಡ ಪರಿಣಾಮ ಭಾರಿ ಅವಘಡ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಅಡುಗೆ ಅನಿಲ ಅಕ್ರಮ ದಾಸ್ತಾನು: ಸಿಲಿಂಡರ್ ಸ್ಫೋಟಗೊಂಡು ಇಬ್ಬರ ಸ್ಥಿತಿ ಗಂಭೀರ Explosion of illegal cooking gas cylinder inventory,ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಸ್ಪೋಟ](https://etvbharatimages.akamaized.net/etvbharat/prod-images/768-512-5636569-thumbnail-3x2-anekal.jpg)
ರಾಜಸ್ಥಾನ ಮೂಲದ ದಿನೇಶ್ ಮತ್ತು ಅನಿಲ್ ದೊಡ್ಡತೋಗೂರಿನ ಬಳಿ ಮನೆಯೊಂದರಲ್ಲಿ ಅಕ್ರಮ ಅಡುಗೆ ಅನಿಲ ಸಿಲಿಂಡರ್ ದಾಸ್ತಾನು ಮಾಡುತ್ತಿದ್ದರು. ದೇವಾ ರಾಮ್ ಎಂಬ ವ್ಯಕ್ತಿ ಈ ಮನೆಗಳನ್ನು ಬಾಡಿಗೆ ತೆಗೆದುಕೊಂಡು ಮೂವರನ್ನು ಕೆಲಸಕ್ಕೆ ನೇರಿಸಿಕೊಂಡು ಸಿಲಿಂಡರ್ ಗ್ಯಾಸ್ ದಂಧೆ ಮಾಡುತ್ತಿದ್ದ. ಈ ಮನೆಯಲ್ಲಿ ಹತ್ತಾರು ಸಿಲಿಂಡರ್ಗಳನ್ನು ತುಂಬಿಸಿಕೊಂಡು ನಂತರ ಅದನ್ನು ಆಟೋ, ಮನೆ, ಹೋಟೆಲ್ಗಳಿಗೆ ಹೆಚ್ಚಿನ ಹಣಕ್ಕೆ ನೀಡುತ್ತಿದ್ದರು ಎನ್ನಲಾಗ್ತಿದೆ. ಇಂದು ಬೆಳಗ್ಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೋಟಗೊಂಡಿದ್ದು, ದಿನೇಶ್ ಮತ್ತು ಅನಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನೂ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ತನಿಖೆ ಮುಂದುವರೆಸಿದ್ದಾರೆ.